ಬಳ್ಳಾರಿ: ಗಣಿನಗರಿ ಬಳ್ಳಾರಿಯ ಎಸ್ಪಿ ಕಚೇರಿಯ ಆವರಣದಲ್ಲಿಂದು ಜಿಲ್ಲಾ ಗೃಹರಕ್ಷಕ ದಳದಿಂದ ಆಯೋಜಿಸಿದ್ದ ಹೆಲ್ಮೆಟ್ ಜಾಗೃತಿ ಜಾಥಾಕ್ಕೆ ಎಸ್ಪಿ ಸೈದುಲು ಅಡಾವತ್ ಚಾಲನೆ ನೀಡಿದರು.
ಗಣಿನಗರಿಯಲ್ಲಿ ಹೆಲ್ಮೆಟ್ ಜಾಗೃತಿ ಜಾಥಾಕ್ಕೆ ಎಸ್ಪಿ ಸೈದುಲು ಚಾಲನೆ - ಬಳ್ಳಾರಿ ಹೆಲ್ಮೆಟ್ ಜಾಗೃತಿ ಜಾಥಾ
ಜಿಲ್ಲಾ ಗೃಹರಕ್ಷಕ ದಳದಿಂದ ಆಯೋಜಿಸಿದ್ದ ಹೆಲ್ಮೆಟ್ ಜಾಗೃತಿ ಜಾಥಾಕ್ಕೆ ಎಸ್ಪಿ ಸೈದುಲು ಅಡಾವತ್ ಅವರು ಚಾಲನೆ ನೀಡಿದ್ದಾರೆ.
ಗೃಹರಕ್ಷಕ ದಳ, ಪೊಲೀಸ್ ಸಿಬ್ಬಂದಿ ಮತ್ತು ಡಿಫೆನ್ಸ್ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದ ಬೈಕ್ ಜಾಗೃತಿ ಜಾಥಾಕ್ಕೆ ಎಸ್ಪಿ ಸೈದುಲು ಹಸಿರು ನಿಶಾನೆ ತೋರಿದರು. ಇದಕ್ಕೂ ಮುಂಚೆ ಗೃಹರಕ್ಷಕ ದಳದ ಸುಮಾರು 18 ಮಂದಿ ಸಿಬ್ಬಂದಿಗೆ ಎಸ್ಪಿ ಹೆಲ್ಮೆಟ್ ವಿತರಣೆ ಮಾಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಲ್ಮೆಟ್ ಧರಿಸದೇ ಇರೋದರಿಂದಲೇ ಸಾವು- ನೋವು ಹೆಚ್ಚಾಗಿದೆ. ಹೀಗಾಗಿ, ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಅದರ ಭಾಗವಾಗಿಯೇ ಹೆಲ್ಮೆಟ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಗೃಹ ರಕ್ಷಕ ದಳದ ಸಿಬ್ಬಂದಿಗೆ ಹೆಲ್ಮೆಟ್ ವಿತರಿಸಲಾಗಿದೆ. ಮೊದಲು ನಾವು ಹೆಲ್ಮೆಟ್ ಧರಿಸಬೇಕು, ಆಮೇಲೆ ಮತ್ತೊಬ್ಬರಿಗೆ ಜಾಗೃತಿ ಮೂಡಿಸಬೇಕೆಂದರು.