ಬಳ್ಳಾರಿ: ಕರ್ನಾಟಕ ರಾಜ್ಯ ಸವಿತಾ ಸಮಾಜದ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಯಾಳ್ಪಿ ಹೆಚ್.ತಿಪ್ಪಣ್ಣ 2300 ಮತಗಳ ಅಂತರದಿಂದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ಸವಿತಾ ಸಮಾಜದ ಚುನಾವಣೆ.. ಯಾಳ್ಪಿ ತಿಪ್ಪಣ್ಣ 2300 ಮತಗಳಿಂದ ಜಯ - ಬಳ್ಳಾರಿ ಜಿಲ್ಲಾ ಸವಿತಾ ಸಮಾಜ ಸುದ್ದಿ
ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆದ ಚುನಾವಣೆಯಲ್ಲಿ ಸಂಪತ್ ಕುಮಾರ್ ಅವರ ನೇತೃತ್ವದ ತಂಡದಲ್ಲಿ 18 ಅಭ್ಯರ್ಥಿಗಳು ಜಯಶಾಲಿಗಳಾಗಿದ್ದಾರೆ. ಅದರಲ್ಲಿ ಕರ್ನಾಟಕ ರಾಜ್ಯ ಸವಿತಾ ಸಮಾಜದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಬಳ್ಳಾರಿ ಜಿಲ್ಲೆಯ ಯಾಳ್ಪಿ ಹೆಚ್.ತಿಪ್ಪಣ್ಣರವರು 2,300 ಮತಗಳಿಂದ ಜಯಗಳಿಸಿದ್ದಾರೆ.
ಕರ್ನಾಟಕ ರಾಜ್ಯ ಸವಿತಾ ಸಮಾಜದ ರಾಜ್ಯ ಕಾರ್ಯಕಾರಿಣಿ ಸಮಿತಿಯಿಂದ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆದ ಚುನಾವಣೆಯಲ್ಲಿ ಸಂಪತ್ ಕುಮಾರ್ ಅವರ ನೇತೃತ್ವದ ತಂಡದಲ್ಲಿ 18 ಅಭ್ಯರ್ಥಿಗಳು ಜಯಶಾಲಿಗಳಾಗಿದ್ದಾರೆ. ಅದರಲ್ಲಿ ಕರ್ನಾಟಕ ರಾಜ್ಯ ಸವಿತಾ ಸಮಾಜದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಬಳ್ಳಾರಿ ಜಿಲ್ಲೆಯ ಯಾಳ್ಪಿ ಹೆಚ್. ತಿಪ್ಪಣ್ಣರವರು 2,300 ಮತಗಳಿಂದ ಜಯಗಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯ ಸವಿತಾ ಸಮಾಜದ ನಿಗಮ ಮಂಡಳಿಗೆ, ಸಮಾಜದ ಶಿಕ್ಷಣ, ಸ್ವಉದ್ಯೋಗ, ಕಲ್ಯಾಣ ಮಂಟಪಗಳ ಅಭಿವೃದ್ಧಿಗಾಗಿ 100 ಕೋಟಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸವಿತಾ ಸಮಾಜದ ಜಿ.ಶ್ರೀಧರ್, ನಾಗರಾಜ್, ಪಂಪಾಪತಿ, ತ್ಯಾಗರಾಜ್,ಲಕ್ಷ್ಮಣ, ಜಿ.ಮಹೇಶ್,ಆನಂದ್, ಲಿಂಗಣ್ಣ ಜನನ ಹಾಜರಿದ್ದರು.