ಬಳ್ಳಾರಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಗಣಿನಗರಿ ಬಳ್ಳಾರಿ ರೈಲು ನಿಲ್ದಾಣದಲ್ಲೂ ಬಾಂಬ್ ಪತ್ತೆದಳ ತಂಡದಿಂದ ತೀವ್ರ ತಪಾಸಣೆ ನಡೆಸಲಾಯಿತು.
ಮಂಗಳೂರು ಸಜೀವ ಬಾಂಬ್ ತಂದ ಆತಂಕ: ಗಣಿನಗರಿ ರೈಲ್ವೆ ನಿಲ್ದಾಣದಲ್ಲೂ ತಪಾಸಣೆ - Bellary railway station news
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಗಣಿನಗರಿ ಬಳ್ಳಾರಿ ರೈಲು ನಿಲ್ದಾಣದಲ್ಲೂ ಬಾಂಬ್ ಪತ್ತೆದಳ ತಂಡದಿಂದ ತೀವ್ರ ತಪಾಸಣೆ ನಡೆಸಲಾಯಿತು.
ಗಣಿನಗರಿ ರೈಲ್ವೆ ನಿಲ್ದಾಣದಲ್ಲೂ ತಪಾಸಣೆ
ಡಿಎಆರ್ ಪೊಲೀಸ್ ಅಧಿಕಾರಿ ಹೆಚ್.ಎಂ.ಡಿ ಸರ್ದಾರ್ ನೇತೃತ್ವದ ತಂಡವು, ರೈಲ್ವೆ ಹೊರಾಂಗಣದಲ್ಲಿ ನಿಲುಗಡೆಯಾದ ಬೈಕ್, ಲಘು ವಾಹನಗಳು ಹಾಗೂ ಒಳಾಂಗಣದಲ್ಲಿನ ಪ್ರಯಾಣಿಕರ ಬ್ಯಾಗ್ಗಳನ್ನು ತಪಾಸಣೆ ಮಾಡಿದ್ರು. ರೈಲ್ವೆ ಇಲಾಖೆಯ ಅಧಿಕಾರಿ ತಾರಾಬಾಯಿ ಸೇರಿದಂತೆ ಇತರ ರೈಲ್ವೆ ಇಲಾಖೆ ಸಿಬ್ಬಂದಿ ಈ ವೇಳೆ ಹಾಜರಿದ್ದರು.