ಬಳ್ಳಾರಿ:ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಒಂದನೇ ವಾರ್ಡ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಸ್ತೆಯು ಸಂಪೂರ್ಣ ಜಲಾವೃತಗೊಂಡಿದ್ದು, ಸಂಚಾರಕ್ಕೆ ಯೋಗ್ಯವಿಲ್ಲದೆ ಕೆಸರು ಗದ್ದೆಯಂತಾಗಿದೆ. ಹೀಗಾಗಿ ಪಟ್ಟಣ ಪಂಚಾಯತಿ ಸದಸ್ಯರ ನೇತೃತ್ವದಲ್ಲಿ ರಸ್ತೆಯಲ್ಲಿನ ಗುಂಡಿಗಳಲ್ಲಿ ಸಸಿ ನೆಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಬಳ್ಳಾರಿ: ಕೆಸರು ಗದ್ದೆಯಂತಾದ ರಸ್ತೆ ದುರಸ್ತಿಗೆ ಗಿಡ ನೆಟ್ಟು ಪ್ರತಿಭಟನೆ - Koodligi of Bellary District
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ತಾಲೂಕಿನ ಒಂದನೇ ವಾರ್ಡ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಸ್ತೆಯು ಸಂಪೂರ್ಣ ಜಲಾವೃತಗೊಂಡಿದ್ದು, ಸಂಚಾರಕ್ಕೆ ಯೋಗ್ಯವಿಲ್ಲದೆ ಕೆಸರು ಗದ್ದೆಯಂತಾಗಿದೆ. ಹೀಗಾಗಿ ಪಟ್ಟಣ ಪಂಚಾಯತಿ ಸದಸ್ಯರ ನೇತೃತ್ವದಲ್ಲಿ ಸಸಿ ನೆಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಬಳ್ಳಾರಿ: ಕೆಸರು ಗದ್ದೆಯಂತಾದ ರಸ್ತೆ ದುರಸ್ತಿಗೆ ಗಿಡ ನೆಟ್ಟು ಪ್ರತಿಭಟನೆ
ಕೂಡ್ಲಿಗಿಯ ರಾಮ ಕಾಟ್ವಾ ರಸ್ತೆಯ ಮಧ್ಯೆ ನೀರು, ಮಣ್ಣು ಶೇಖರಣೆಯಾಗಿ ಕೆಸರುಗದ್ದೆಯಂತಾಗಿದೆ. ಈ ದಾರಿಯಲ್ಲಿ ಓಡಾಡಲು ಹಾಗೂ ವಾಹನಗಳು ಸಂಚಾರ ಮಾಡಲೂ ಸಾಧ್ಯವಾಗುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ರಸ್ತೆ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಸದಸ್ಯರಾದ ಬಿ.ಎಂ. ತ್ರಿಮೂರ್ತಿ ಮತ್ತು ಬಿಜೆಪಿಯ ಯುವ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.