ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ ನಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಆದ್ರೆ ಬಳ್ಳಾರಿ ಜನ ಮಾತ್ರ ತಮಗೆ ಇಷ್ಟ ಬಂದ ಹಾಗಿ ಓಡಾಡುತ್ತಿರುವುದು ಪೊಲೀಸರನ್ನು ಕೆರಳಿಸಿದೆ.
ಮಾತಿಗೆ ಬಗ್ಗದ ಜನರಿಗೆ ಲಾಠಿ ಏಟಿನ ರುಚಿ ತೋರಿಸಿದ ಬಳ್ಳಾರಿ ಪೊಲೀಸ್ - ಪೊಲೀಸರು ವರ್ಕೌಟ್
ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಬಳ್ಳಾರಿಯ ರಸ್ತೆಯಲ್ಲಿ ಓಡಾಡುವವರ ಸಂಖ್ಯೆ ಕಡಿಮೆಯಾಗ್ತಿಲ್ಲ. ಹೀಗಾಗಿ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಓಡಾಡೋರಿಗೆ ಪೊಲೀಸರು ಲಾಠಿ ರುಚಿ ತೋರಿಸ್ತಿದ್ದಾರೆ.
ಮಾತಿಗೆ ಬಗ್ಗದ ಜನರಿಗೆ ಲಾಠಿ ಏಠಿನ ಮೂಲಕ ಬುದ್ಧಿ ಕಲಿಸಿದ ಗಣಿನಗರಿ ಪೊಲೀಸ್
ಬಳ್ಳಾರಿಯಲ್ಲಿ ರಸ್ತೆಯಲ್ಲಿ ಓಡಾಡುವವರ ಸಂಖ್ಯೆ ಇನ್ನೂ ಕಡಿಮೆಯಾಗ್ತಿಲ್ಲ. ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಓಡಾಡೋರಿಗೆ ಪೊಲೀಸರು ಲಾಠಿ ರುಚಿ ತೋರಿಸ್ತಿದ್ದಾರೆ. ಸಿಪಿಐ ಗಾಯಿತ್ರಿ ಅವರು ಲಾಠಿ ಮೂಲಕವೇ ಬುದ್ಧಿ ಕಲಿಸುತ್ತಿದ್ದಾರೆ.