ಬಳ್ಳಾರಿ:ಜಿಲ್ಲೆಯ ಹೊಸಪೇಟೆ ನಗರದಲ್ಲಿ ಮನೆಗಳ್ಳತನ ಸೇರಿದಂತೆ ಇನ್ನಿತರೆ ಪ್ರಕರಣಗಳಲ್ಲಿ ಕಳುವಾದ ಅಂದಾಜು 62 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗು ನಗದು ವಶಕ್ಕೆ ಪಡೆದಿದ್ದಾರೆ.
ಕಳೆದ ಸೆಪ್ಟೆಂಬರ್ 17ರಂದು ಹೊಸಪೇಟೆ ಅರವಿಂದ ನಗರದ ನಿವಾಸಿ ಗುರುರಾಜ ಎಂಬುವವರ ಮನೆಯ ತಿಜೋರಿಯಲ್ಲಿದ್ದ ಸರಿಸುಮಾರು 9 ಲಕ್ಷ ರೂ ನಗದು ಹಾಗೂ ಅಂದಾಜು 1 ಕೆ.ಜಿ. 220 ಗ್ರಾಂ ತೂಕದ ಬಂಗಾರದ ಆಭರಣ ಕಳುವಾಗಿತ್ತು. ಈ ಪ್ರಕರಣ ಬೇಧಿಸೋದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹೆಚ್ಚುವರಿ ಎಸ್ಪಿ ಲಾವಣ್ಯ ಹಾಗೂ ಹೊಸಪೇಟೆ ನಗರ ಡಿವೈಎಸ್ಪಿ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿ, ವಿಶೇಷ ಕಾರ್ಯಾಚರಣೆ ಮಾಡಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ತಿಳಿಸಿದ್ದಾರೆ.