ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಆದೇಶ ಸ್ಪಷ್ಟ ಉಲ್ಲಂಘನೆ.. ಬೇಕರಿ ಮುಂದೆ ನೂರಾರು ಜನ..

ಈ ಬೇಕರಿ ಮಾಲೀಕ ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲವಂತೆ. ಪೊಲೀಸರು ಹಲವಾರು ಬಾರಿ ಎಚ್ಚರಿಕೆ ನೀಡಿದರೂ ಸಹ ಇದನ್ನು ಗಣನೆಗೆ ತೆಗೆದುಕೊಳ್ಳದೆ ಬೇಕರಿ ತೆರೆದಿದ್ದು, ನೂರಾರು ಮಂದಿ ಒಟ್ಟಿಗೆ ಸೇರುವಂತೆ ಮಾಡುತ್ತಿದ್ದಾನೆ.

bellary-people-violation-of-lockdown-order
ಬೇಕರಿ ಮುಂದೆ ನೂರಾರು ಜನ ಜಮಾವಣೆ

By

Published : May 1, 2020, 11:59 AM IST

ಬಳ್ಳಾರಿ: ಮೇ3ರವರೆಗೆ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯಬಾರದು ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೂ ಇಲ್ಲಿ ಬೇಕರಿ ತೆರೆಯಲಾಗಿದೆ. ಸಾಮಾನು ಖರೀದಿಸಲು ಜನ ಮುಗಿಬಿದ್ದಿದ್ದಾರೆ.

‌ಬಳ್ಳಾರಿ ನಗರದ ಪ್ರಮುಖ ವೃತ್ತವಾದ ದುರ್ಗಮ್ಮನ ಗುಡಿ ಮುಂದೆ ರೇಣುಕ ಬೇಕರಿ ಇದೆ. ಜನ ಬೆಳಗ್ಗೆಯಿಂದ ರಾತ್ರಿ 10 ಗಂಟೆಯವರೆಗೂ ಈ ಬೇಕರಿ ಪದಾರ್ಥ ಖರೀದಿಸಲು ಗುಂಪು ಗುಂಪಾಗಿ ಸೇರುತ್ತಾರೆ. ಸಾಮಾಜಿಕ ಅಂತರವಿರುವುದಿಲ್ಲ, ಮಾಸ್ಕ್‌ಗಳನ್ನು ಸಹ ಹಾಕುವುದಿಲ್ಲ. ಈ ವೃತ್ತದಿಂದ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿ 500 ಮೀಟರ್ ಇದೆ. ಆದರೆ, ಇಲ್ಲಿರುವ ಪೊಲೀಸ್​ ಅಧಿಕಾರಿಗಳು, ಪಾಲಿಕೆಯ ಅಧಿಕಾರಿಗಳು ಈ ಕಡೆ ಮಾತ್ರ ಗಮನ ಹರಿಸುತ್ತಿಲ್ಲ.

ಬೇಕರಿ ಮುಂದೆ ನೂರಾರು ಜನ ಜಮಾವಣೆ..

ಈ ಬೇಕರಿ ಮಾಲೀಕ ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲವಂತೆ. ಪೊಲೀಸರು ಹಲವಾರು ಬಾರಿ ಎಚ್ಚರಿಕೆ ನೀಡಿದರೂ ಸಹ ಇದನ್ನು ಗಣನೆಗೆ ತೆಗೆದುಕೊಳ್ಳದೆ ಬೇಕರಿ ತೆರೆದಿದ್ದು, ನೂರಾರು ಮಂದಿ ಒಟ್ಟಿಗೆ ಸೇರುವಂತೆ ಮಾಡುತ್ತಿದ್ದಾನೆ.

ಇನ್ನೊಂದೆಡೆ ನಮಗೆ ಪಿಂಚಣಿ ಹಣ ಬಂದಿಲ್ಲ ಎಂದು ಹಿರಿಯ ಜೀವಗಳು ಯಾವುದೇ ಸಾಮಾಜಿಕ ಅಂತರ ಕಯ್ದುಕೊಳ್ಳದೆ, ಮಾಸ್ಕ್​ ಕೂಡ ಧರಿಸಿದರೆ ತಹಶೀಲ್ದಾರ್​ ಕಚೇರಿಗೆ ಗುಂಪು ಗುಂಪಾಗಿ ಆಗಮಿಸಿದ್ದರು. ಇಷ್ಟೆಲ್ಲಾ ಲಾಕ್​ಡೌನ್ ಆದೇಶ ಉಲ್ಲಂಘನೆ ಆಗುತ್ತಿದ್ದರೂ ಸಹ ಪೊಲೀಸರು ಹಾಗೂ ಜಿಲ್ಲಾಡಳಿತ ಸುಮ್ಮನಿರುವುದು ಬೇಜವಾಬ್ದಾರಿಗೆ ಹಿಡಿದ ಕನ್ನಡಿ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ABOUT THE AUTHOR

...view details