ಬಳ್ಳಾರಿ:ಬಳ್ಳಾರಿಯಂತಹ ಐತಿಹಾಸಿಕ ಜಿಲ್ಲೆಗೆ ಎಸ್ಪಿಯಾಗಿ ನೇಮಕಗೊಂಡಿರುವ ನನ್ನ ಮುಂದೆ ಈಗ ದೊಡ್ಡ ಸವಾಲಿದೆ ಎಂದು ನೂತನ ಎಸ್ಪಿ ಸೈದುಲು ಅಡಾವತ್ ಹೇಳಿದರು.
ಬಳ್ಳಾರಿ ಎಸ್ಪಿಯಾದ ನನ್ನ ಮುಂದೆ ದೊಡ್ಡ ಸವಾಲಿದೆ: ಎಸ್ಪಿ ಸೈದುಲು ಅಡಾವತ್ - Bellary Latest News
ಬಳ್ಳಾರಿ ಜಿಲ್ಲೆಗೆ ಎಸ್ಪಿಯಾಗಿ ನೇಮಕಗೊಂಡಿರುವ ನನ್ನ ಮುಂದೆ ಈಗ ದೊಡ್ಡ ಸವಾಲಿದೆ ಎಂದು ನೂತನ ಎಸ್ಪಿ ಸೈದುಲು ಅಡಾವತ್ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು.
ನೂತನ ಎಸ್ಪಿ ಸೈದುಲು ಅಡಾವತ್
ಬೆಂಗಳೂರಿನ ಲೋಕಾಯುಕ್ತ ಪೊಲೀಸ್ ಇಲಾಖೆಯಿಂದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ವರ್ಗಾವಣೆಗೊಂಡ ಬಳಿಕ ಮೊದಲ ಬಾರಿಗೆ ಮಾಧ್ಯಮದೊಂದಿಗೆ ಅವರು ಮಾತನಾಡಿದರು.
ಇನ್ನು ರಸಗೊಬ್ಬರ ಕಳ್ಳತನ ಪ್ರಕರಣ ಸಂಬಂಧ ಮಾತನಾಡಿದ ಅವರು, ಖಾಸಗಿ ಕಂಪನಿಯ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಲಾರಿ ಸೇರಿದಂತೆ ಅಂದಾಜು 500ಕ್ಕೂ ಅಧಿಕ ಬ್ಯಾಗ್ಗಳುಳ್ಳ ಯುರಿಯಾ ಮತ್ತು ಡಿಐಪಿ ರಸಗೊಬ್ಬರವನ್ನ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣವನ್ನು ಭೇದಿಸಿದ ಬ್ರೂಸ್ ಪೇಟೆ ಠಾಣೆಯ ಪೊಲೀಸರು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಈ ವೇಳೆ ತಿಳಿಸಿದರು.