ದಾವಣಗೆರೆ: ಬಳ್ಳಾರಿ ಬಿಜೆಪಿ ಸಂಸದ ವೈ.ದೇವೇಂದ್ರಪ್ಪ ಅವರ ಪುತ್ರನ ವಿರುದ್ಧ ಕೇಳಿ ಬಂದಿರುವ ಪ್ರೀತಿ ಹೆಸರಲ್ಲಿ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಸಂಸದರು ಪ್ರತಿಕ್ರಿಯಿಸಿದ್ದಾರೆ. ಅರಸೀಕೆರೆ ಗ್ರಾಮದ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ದೆಹಲಿಯಿಂದ ಬಳ್ಳಾರಿಗೆ ತೆರಳುವ ವೇಳೆ ಯುವತಿಯೊಬ್ಬಳಿಂದ ಕರೆ ಬಂದಿತ್ತು. ಈ ಕರೆ ಸ್ವೀಕರಿಸಿ ಮಾತನಾಡಿದಾಗ ನಿಮ್ಮ ಮಗ ನನ್ನನ್ನು ಒಂದೂವರೆ ವರ್ಷದಿಂದ ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ಬಳಸಿಕೊಂಡು ವಂಚನೆ ಮಾಡಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಳು.
ಇದರ ಬಗ್ಗೆ ನನಗೆ ಗೊತ್ತಿಲ್ಲಮ್ಮ ಎಂದು ಹೇಳಿದ್ದೆ. ಅನ್ಯಾಯವಾಗಿದ್ದರೆ ಕಾನೂನು ಪ್ರಕಾರ ಕೋರ್ಟ್‌ಗೆ ಹೋಗಲಿ, ಅವನು ಆ ಯುವತಿ ಏನ್ ತಪ್ಪು ಮಾಡಿದ್ದಾರೋ ನನಗೆ ಮಾಹಿತಿ ಇಲ್ಲ. ಒಂದು ಹೆಣ್ಣಿಗೆ ಅನ್ಯಾಯವಾಗಿದ್ದರೆ ಪೊಲೀಸ್ ಠಾಣೆ, ಕೋರ್ಟ್, ಕಚೇರಿಗೆ ಹೋಗಿ ನ್ಯಾಯ ಪಡೆಯುವ ಹಕ್ಕಿದೆ.
ನನ್ನ ಮಗನೊಂದಿಗೆ ಈ ಬಗ್ಗೆ ಮಾತನಾಡಿದಾಗ, ಇಲ್ಲ ಅಪ್ಪ ಕೊಳಾಳ್ ಎಂಬ ಗ್ರಾಮದ ಯುವಕ ಈ ಯುವತಿಯನ್ನು ಪರಿಚಯಿಸಿದ. ಇದರಲ್ಲಿ ಆರು ಏಳು ತಿಂಗಳಿಂದ ಬಹಳ ನೋವು ಅನುಭವಿಸಿದ್ದೇನೆ ಎಂದು ತಿಳಿಸಿದ್ದಾನೆ. ಇದರಲ್ಲಿ ಷಡ್ಯಂತರ ಇರುವ ಬಗ್ಗೆ ಅನುಮಾನ ಇದೆ. ಈಗಾಗಲೇ ಮದುವೆ ಮಾಡಿ 10 ರಿಂದ 12 ವರ್ಷ ಕಳೆದು ಹೋಗಿದೆ. ಯಾರೋ ಬ್ಲಾಕ್ ಮೇಲ್ ಮಾಡಿ ನನ್ನ ಮಗನಲ್ಲಿದ್ದ ಗೋಲ್ಡ್ ಚೈನ್ ಕಿತ್ತುಕೊಂಡಿದ್ದಾರೆ.
ನಾನು ಎಂದೂ ಅವರು ಮುಖ ನೋಡಿಲ್ಲ. ಅವರು ಯಾರು ಅಂತಾ ಗೊತ್ತಿಲ್ಲ. ಮುಂದಿನ ಚುನಾವಣೆ ಇರುವುದರಿಂದ ರಾಜಕೀಯ ಷಡ್ಯಂತ್ರವಿದೆ. ಬೆಂಗಳೂರಿನಲ್ಲಿ ಒಂದು ಗ್ಯಾಂಗ್ ಇದೆ. ಆರೇಳು ತಿಂಗಳಿನಿಂದ ಆ ಗ್ಯಾಂಗ್ಗೆ ದುಡ್ಡು ಕೊಟ್ಟಿದ್ದಾನೆ. ಈ ರೀತಿ ನಡೆಯುತ್ತಿರುವುದರಿಂದ ನನ್ನ ಮಗನೂ ಕೇಸ್ ಮಾಡಿದ್ದಾನೆ. ಕೊಳಾಳ್ ಗ್ರಾಮ ಕಲ್ಲೇಶ್ ಎಂಬುವನು ಪ್ರಕರಣದಲ್ಲಿದ್ದಾನೆ ಎಂದರು.
ಇದನ್ನೂ ಓದಿ:ದಂಡ ಕಟ್ಟಿದ್ದೇನೆ, ಕರೆಂಟ್ ಕಳ್ಳ ಎನ್ನುವುದನ್ನು ನಿಲ್ಲಿಸಿ: ಹೆಚ್.ಡಿ.ಕುಮಾರಸ್ವಾಮಿ