ಕರ್ನಾಟಕ

karnataka

ETV Bharat / state

ಎಸ್ಸಿ ಮೀಸಲು ವಾರ್ಡ್​ನಲ್ಲಿ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕೃತ - ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕೃತ

ಮಹಾನಗರ ಪಾಲಿಕೆ ವ್ಯಾಪ್ತಿಯ ಒಂದನೇ ವಾರ್ಡಿನಿಂದ ಹೆಚ್.ಎಂ. ಕಿರಣಕುಮಾರ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಮೊದಲು ಅವರ ನಾಮಪತ್ರ ಸ್ವೀಕೃತಗೊಂಡಿತ್ತು. ಕೊನೆ ಗಳಿಗೆಯಲ್ಲಿ ಈ ಬಗ್ಗೆ ಗೊಂದಲ ಸೃಷ್ಟಿಯಾಗುತ್ತಿದ್ದಂತೆಯೇ ಚುನಾವಣಾಧಿಕಾರಿ ನಾಮಪತ್ರ ತಿರಸ್ಕರಿಸಿದ್ದಾಗಿ ತಿಳಿಸಿದ್ದಾರೆ.

ನಾಮಪತ್ರ ತಿರಸ್ಕೃತ
ನಾಮಪತ್ರ ತಿರಸ್ಕೃತ

By

Published : Apr 18, 2021, 8:00 AM IST

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬೇಡ ಜಂಗಮ ಜಾತಿ ಪ್ರಮಾಣಪತ್ರ ಹೊಂದಿರುವ ಪಕ್ಷೇತರ ಅಭ್ಯರ್ಥಿವೋರ್ವರು ಅನುಸೂಚಿತ ಜಾತಿಗೆ ಮೀಸಲಿರಿಸಿದ್ದ ವಾರ್ಡಿನಿಂದ ಸ್ಪರ್ಧೆ ಬಯಸಿ ಸಲ್ಲಿಸಿದ್ದ ನಾಮಪತ್ರ ಮೊದಲು ಅಂಗೀಕೃತಗೊಂಡು ಬಳಿಕ ತಿರಸ್ಕೃತಗೊಂಡಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯ ಒಂದನೇ ವಾರ್ಡಿನಿಂದ ಹೆಚ್.ಎಂ. ಕಿರಣಕುಮಾರ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಮೊದಲು ಅವರ ನಾಮಪತ್ರ ಸ್ವೀಕೃತಗೊಂಡಿತ್ತು. ಕೊನೆ ಗಳಿಗೆಯಲ್ಲಿ ಈ ಬಗ್ಗೆ ಗೊಂದಲ ಸೃಷ್ಟಿಯಾಗುತ್ತಿದ್ದಂತೆಯೇ ಚುನಾವಣಾಧಿಕಾರಿ ನಾಮಪತ್ರ ತಿರಸ್ಕರಿಸಿದ್ದಾಗಿ ತಿಳಿಸಿದ್ದಾರೆ.

ಮೊದಲು ಪ್ರಕಟಗೊಂಡಿದ್ದ ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಿರಣಕುಮಾರ ಅವರ ಹೆಸರಿತ್ತು. ಶನಿವಾರ ಬೆಳಗಿನ ಪಟ್ಟಿಯಲ್ಲಿ ಆತನ ಹೆಸರು ತೆಗೆಯಲಾಗಿತ್ತು. ಒಂದೆಡೆ ದಲಿತ ಸಂಘಟನೆ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ನಾಮಪತ್ರ ತಿರಸ್ಕರಿಸಿ, ಜೊತೆಗೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರವನ್ನ ನೀಡಿದವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.

ಇದಲ್ಲದೇ, ಒಂದನೇ ವಾರ್ಡಿನ ಚುನಾವಣೆ ಅಧಿಕಾರಿಯೂ ಆಗಿದ್ದ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರ ಕಚೇರಿ ಮುಂದೆ ದಲಿತ ಮುಖಂಡರು ಧರಣಿ ನಡೆಸಲು ಮುಂದಾದರು. ಕೊನೆಗೆ ಅಪರ ಜಿಲ್ಲಾಧಿಕಾರಿ ಮಂಜುನಾಥ ಅವರು ನಾಮಪತ್ರ ತಿರಸ್ಕಾರ ಮಾಡಿದ್ದು, ಮಾತ್ರವಲ್ಲದೇ, ಸೂಕ್ತಕ್ರಮ ವಹಿಸೋದಾಗಿ ಭರವಸೆ ನೀಡಿದ್ದರ ಪ್ರತಿಫಲವಾಗಿ ಧರಣಿ ವಾಪಸ್ ಪಡೆದರು.

ಇತ್ತ ಪಕ್ಷೇತರ ಅಭ್ಯರ್ಥಿ ಕಿರಣಕುಮಾರ ಸಮುದಾಯದವರು ಸಭೆ ಸೇರಿ ನಾಮಪತ್ರ ಅಂಗೀಕೃತ ಆಗಿದೆ ಎಂದು ತಿಳಿಸಿದ್ದಾರೆ. ಈಗ ಏಕಾಏಕಿ ತಿರಸ್ಕರಿಸಿದ್ದು ಕಾನೂನುಬಾಹಿರ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಇತ್ತ ದಲಿತ ಮುಖಂಡರು ಸಹ ಇಂಥಹ ಪ್ರಕರಣಗಳು ಪದೆಪದೇ ಮರುಕಳಿಸದಂತೆ ಸೂಕ್ತಕ್ರಮ ವಹಿಸಲು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಅಗತ್ಯ ದಾಖಲೆ ಸಂಗ್ರಹಿಸಲು ಮುಂದಾಗಿದ್ದಾರೆ. ಕಿರಣಕುಮಾರ ಅವರು ನಾಮಪತ್ರ ಸಲ್ಲಿಸುವಾಗ ಚುನಾವಣಾಧಿಕಾರಿಗೆ ನೀಡಿರುವ ದಾಖಲೆಗಳ ಪ್ರತಿ ನೀಡಲು ಆಗ್ರಹಿಸಿ, ಒಂದನೇ ವಾರ್ಡಿನ ಚುನಾವಣಾ ಅಧಿಕಾರಿಯೂ ಆದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿಯ ಮುಂದೆ ಎರಡು ತಾಸಿಗೂ ಹೆಚ್ಚು ಹೊತ್ತು ಪ್ರತಿಭಟನೆ ನಡೆಸಿದರು.

ಪಕ್ಷೇತರ ಅಭ್ಯರ್ಥಿ ಕಿರಣಕುಮಾರ ಸಲ್ಲಿಸಿರುವ ಎಸ್‌ಸಿ ಜಾತಿ ಪ್ರಮಾಣ ಪತ್ರವು ಬಳ್ಳಾರಿಯಿಂದ ಪಡೆದಿದ್ದರೆ ನಾಮಪತ್ರ ತಿರಸ್ಕರಿಸಲು ಬರುತ್ತಿರಲಿಲ್ಲ. ಅದು ಬೆಂಗಳೂರಿನಲ್ಲಿ ಪಡೆದ ಪ್ರಮಾಣಪತ್ರ ನೀಡಿದ್ದರಿಂದ ನಾಮಪತ್ರ ತಿರಸ್ಕರಿಸಲಾಗಿದೆ. ಜಾತಿ ಪ್ರಮಾಣ ಪತ್ರದ ಸಿಂಧುತ್ವವನ್ನ ಪ್ರಶ್ನಿಸುವ ಅಧಿಕಾರ ಚುನಾವಣಾಧಿಕಾರಿಗೆ ಇರೋದಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಮಂಜುನಾಥ ಸ್ಪಷ್ಟನೆ ನೀಡಿದ್ದಾರೆ.

ಓದಿ : ಮತ್ತೆ ಅದೇ ರಾಗ.. ರಾಜ್ಯದಲ್ಲಿ ಸಿಎಂ ಬದಲಾವಣೆ ಪರ್ವ ಸದ್ಯದಲ್ಲೇ ಪ್ರಾರಂಭ: ಯತ್ನಾಳ್​

ABOUT THE AUTHOR

...view details