ಬಳ್ಳಾರಿ:ಇಲ್ಲಿನ ಮಹಾನಗರ ಪಾಲಿಕೆ ವಿರುದ್ಧ ಮೂಲಸೌಲಭ್ಯಕ್ಕೆ ಆಗ್ರಹಿಸಿ ಸತ್ಯನಾರಾಯಣಪೇಟೆ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.
ಬಿಜೆಪಿ ಮುಖಂಡ ಡಾ.ಸುಂದರ್ ಮಾತನಾಡಿದರು. ಕಳೆದ 10 ವರುಷಗಳಿಂದಲೂ ಸತ್ಯನಾರಾಯಣ ಪೇಟೆ, ಗೊಲ್ಲ ನರಸಪ್ಪ ಕಾಲೊನಿ, ಸಿದ್ಧಿಕಿ ಕಾಂಪೌಂಡ್ ಸೇರಿದಂತೆ ಇತರೆಡೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಮಹಾನಗರ ಪಾಲಿಕೆ ವಿಫಲವಾಗಿದೆ. ಒಳಚರಂಡಿ ಸಮಸ್ಯೆಯಂತೂ ಹೇಳತೀರದಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ ಎಂದು ಬಿಜೆಪಿ ಮುಖಂಡ ಡಾ.ಸುಂದರ್ ದೂರಿದ್ದಾರೆ.
ಮಹಾನಗರ ಪಾಲಿಕೆ ಹಾಗೂ ಕಾಲೊನಿ ನಿವಾಸಿಗಳ ನಡುವೆ ಸಮನ್ವಯತೆ ಕೊರತೆಯಿದೆ. ಅದನ್ನು ನೀಗಿಸುವಲ್ಲಿ ಪಾಲಿಕೆ ಆಯುಕ್ತರು ಮುಂದಾಗಬೇಕಿತ್ತು. ಈಗ ಅದು ಎಲ್ಲೇ ಮೀರಿದೆ. ಹಾಗಾಗಿ ಪಾಲಿಕೆ ಈ ಕೂಡಲೇ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಕೆ.ಎಸ್. ಅಶೋಕ್, ಮುಖಂಡ ಪ್ರಭು, ಮಹಾನಗರ ಪಾಲಿಕೆ ಕೆಡಬ್ಲ್ಯುಎಸ್ ಖಾಜಾ ಮಹಮ್ಮದ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.