ಬಳ್ಳಾರಿ :ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಇಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಶನ್ ನೇತೃತ್ವದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಕಾಲೇಜು ಆರಂಭವಾಗಿ ಮೂರು-ನಾಲ್ಕು ತಿಂಗಳ ನಂತರ ಪರೀಕ್ಷೆಗಳ ದಿನಾಂಕವನ್ನು ನಿಗದಿ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಪೂಜಾ ಮಾತನಾಡಿ, ಕಾಲೇಜಿಗೆ ಒಂದೂವರೆ ತಿಂಗಳು ಮಾತ್ರ ಹೋಗಿದ್ದೇವೆ. ಆದರೆ, ಈ ಲಾಕ್‌ಡೌನ್‌ನಿಂದಾಗಿ ಯಾವುದೇ ಪಾಠಗಳು, ಪ್ರಾಯೋಗಿಕ ವಿಷಯಗಳು ನಡೆದಿಲ್ಲ. ನಾನು ಒಂದು ತಿಂಗಳು ಲಾಕ್‌ಡೌನ್ ಆಗುತ್ತೆ ಅಂತಾ ಅಂದುಕೊಂಡಿದ್ದೆ. ಆದರೆ, 9 ತಿಂಗಳು ಲಾಕ್‌ಡೌನ್ ಆಗಿದೆ. ಯಾವುದೇ ಪುಸ್ತಕಗಳನ್ನು ಮನೆಗಳಿಗೆ ತೆಗೆದುಕೊಂಡು ಹೋಗಿಲ್ಲ.
ಎಂಸಿಎಲ್ ಅವರು ಕಾಲೇಜ್ ಆರಂಭವಾದ ಮೂರು ತಿಂಗಳ ನಂತರ ಪರೀಕ್ಷೆಗಳನ್ನು ನಿಗದಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ಏಕಾಏಕಿ ಕಾಲೇಜ್ ಒಪನ್ ಆಗಿಲ್ಲ, ತಿಂಗಳಲ್ಲಿ ಪರೀಕ್ಷೆಗಳನ್ನು ಬರೆಯಿರಿ ಎಂದರೆ ಹೇಗೆ ಬರೆಯಬೇಕು ಎಂದು ಪ್ರಶ್ನೆ ಮಾಡಿದರು. ಹಾಗಾಗಿ, ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.