ಕರ್ನಾಟಕ

karnataka

ETV Bharat / state

ಬರಿಗಾಲಲ್ಲೇ ಟೆಂಪಲ್​ ರನ್​, ಡಿಸಿ ಕಚೇರಿಗೆ ತೆರಳಿದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ! - undefined

ಇಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಡಿಸಿ ಕಚೇರಿಗೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ನಗರದಲ್ಲಿರುವ ವಿವಿಧ ದೇವಾಯಲಗಳಿಗೆ ಬರಿಗಾಲಲ್ಲೇ ಭೇಟಿ ನೀಡುವ ಮೂಲಕ ಗಮನ ಸೆಳೆದರು.

ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ

By

Published : Apr 1, 2019, 7:55 PM IST

Updated : Apr 1, 2019, 8:04 PM IST

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಅವರು ಇಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಾಂಕೇತಿಕವಾಗಿ ಉಮೇದುವಾರಿಕೆ ಸಲ್ಲಿಸಿದರು. ಬರಿಗಾಲಲ್ಲೇ ನಡೆದುಕೊಂಡು ಹೋಗಿ ಗಮನ ಸೆಳೆದರು.

ಇದಕ್ಕೂ ಮುಂಚೆ ಅಭ್ಯರ್ಥಿ ದೇವೇಂದ್ರಪ್ಪ ಅವರು ನಗರದ ಕೋಟೆ ‌ಮಲ್ಲೇಶ್ವರ ದೇಗುಲ, ಬಸವನಕುಂಟೆಯ ಬಸವೇಶ್ವರ ದೇಗುಲ ಹಾಗೂ ಕನಕದುರ್ಗಮ್ಮ ದೇಗುಲಕ್ಕೆ ಬರಿಗಾಲಲ್ಲೇ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಡಿಸಿ ಕಚೇರಿಗೆ ತೆರಳಿದ ಅವರು ನಾಮಪತ್ರವನ್ನು ಜಿಲ್ಲಾ ಚುನಾವಣಾಧಿಕಾರಿ ಡಾ. ವಿ.ರಾಮ ಪ್ರಸಾತ್ ಮನೋಹರ್​ಗೆ ಸಲ್ಲಿಸಿದರು.

ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಂದ್ರಪ್ಪ, ಪ್ರತಿದಿನವೂ ಒಳ್ಳೆಯ ದಿನವೇ. ನಾಳೆ ನಮ್ಮೆಲ್ಲ ನಾಯಕರು ಬುರುತ್ತಾರಲ್ಲ ಅದು ಶ್ರೇಷ್ಠ ಇದೆ. ನಾಳೆಯ ದಿನ ಬಿರುಬಿಸಿಲಿನ ಝಳದಲ್ಲಿ ಕಾರ್ಯಕರ್ತರಿಗೆ ತೊಂದರೆಯಾಗಬಾರದು ಎಂದು ಹೇಳಿ ಈ ದಿನ ಪರಿಶೀಲನಾ ಪ್ರಕ್ರಿಯೆಯನ್ನ ಪೂರ್ಣಗೊಳಿಸಲಾಗಿದೆ. ನಾಳೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಾಗುವುದು. ಈ ವೇಳೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶಾಸಕರಾದ ಕೆ.ಎಸ್.ಈಶ್ವರಪ್ಪ, ಜಗದೀಶ್​ ಶೆಟ್ಟರ್, ಬಿ. ಶ್ರೀರಾಮುಲು ನಾಮಪತ್ರ ಸಲ್ಲಿಸುವ ಸಂದರ್ಭ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಬಹಿರಂಗ ಸಭೆ:

ನಗರದ ಡಾ.ರಾಜ್ ರಸ್ತೆಯಲ್ಲಿನ ಗೋಶ್ ಆಸ್ಪತ್ರೆಯ ಮುಂಭಾಗದ ಆವರಣದಲ್ಲಿ ನಾಳೆ ಬೆಳಗ್ಗೆ 11.30 ಗಂಟೆಗೆ ಬಹಿರಂಗ ಸಭೆಯನ್ನ ನಡೆಯಲಿದೆ. ಬಳಿಕ ಡಿಸಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಾಗುವುದು ಎಂದರು.

Last Updated : Apr 1, 2019, 8:04 PM IST

For All Latest Updates

TAGGED:

ABOUT THE AUTHOR

...view details