ಬಳ್ಳಾರಿ:ಜಿಲ್ಲೆಯ ಸಂಡೂರು ತಾಲೂಕಿನ ಗಂಡಿ ನರಸಿಂಹಸ್ವಾಮಿ ದೇಗುಲದ ಬಳಿಯ ನಾರಿಹಳ್ಳದಲ್ಲಿ ಈಜಲು ಹೋದ ಕೆಎಸ್ಆರ್ಟಿಸಿ ನೌಕರ ನೀರುಪಾಲಾಗಿದ್ದಾನೆ.
ಬಳ್ಳಾರಿ: ನಾರಿಹಳ್ಳದಲ್ಲಿ ಈಜಲು ಹೋದ ಕೆಎಸ್ಆರ್ಟಿಸಿ ನೌಕರ ನೀರುಪಾಲು! - ಕೆಎಸ್ಆರ್ಟಿಸಿ ನೌಕರ ನೀರು ಪಾಲು
ನಾರಿಹಳ್ಳದಲ್ಲಿ ಈಜಲು ಹೋದ ಕೆಎಸ್ಆರ್ಟಿಸಿ ನೌಕರನೋರ್ವ ನೀರು ಪಾಲಾಗಿದ್ದು, ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.
ಕೆಎಸ್ಆರ್ಟಿಸಿ ನೌಕರ ನೀರು ಪಾಲು
ಜಿಲ್ಲೆಯ ಸಂಡೂರು ಉಪವಿಭಾಗದ ಕೆಎಸ್ಆರ್ಟಿಸಿ ಬಸ್ ಡಿಪೋದ ನೌಕರ ಕುಮಾರಸ್ವಾಮಿ (32) ಎಂಬುವವರು ನೀರು ಪಾಲಾದವರೆಂದು ತಿಳಿದುಬಂದಿದೆ. ಆತನ ಜೊತೆಗಿದ್ದ ಶ್ರೀಧರ ಎಂಬ ವ್ಯಕ್ತಿ ನೀಡಿದ ಖಚಿತ ಮಾಹಿತಿ ಮೇರೆಗೆ ಸಂಡೂರಿನ ಪೊಲೀಸರು, ಅಗ್ನಿಶಾಮಕ ಠಾಣೆಯ ಸಿಬ್ಬಂದಿ ನಿನ್ನೆ ಸಂಜೆ 6.30 ರವರೆಗೆ ಕಾರ್ಯಾಚರಣೆ ನಡೆಸಿದರೂ ವ್ಯಕ್ತಿಯ ಸುಳಿವು ಸಿಕ್ಕಿಲ್ಲ.
ಕತ್ತಲಾಗಿದ್ದರಿಂದ ಕಾರ್ಯಾಚರಣೆ ಅರ್ಧಕ್ಕೆ ನಿಲ್ಲಿಸಿದ್ದು, ಇಂದೂ ಕೂಡ ಹುಡುಕಾಟ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.