ಕರ್ನಾಟಕ

karnataka

ETV Bharat / state

ಮಹಾನಗರಕ್ಕೆ ಅಂಟಿದ ಬಳ್ಳಾರಿ ಜಾಲಿ: ಖಾಲಿ ನಿವೇಶನ ಶುಚಿತ್ವ ಕಾರ್ಯ ಯಾವಾಗ? - ಅನಧಿಕೃತ ಬಡಾವಣೆ

ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಈ ಬಳ್ಳಾರಿ ಜಾಲಿ ಬೆಳೆದು ನಿಂತಿದೆ. ಹಂದಿ, ನಾಯಿ ಹಾಗೂ ಬಿಡಾಡಿ ದನಗಳ ಆವಾಸಸ್ಥಾನಕ್ಕೆ ಬಡಾವಣೆಗಳಲ್ಲಿನ ಮನೆಯ ಎತ್ತರಕ್ಕೆ ಬೆಳೆದು ನಿಂತಿರೋ ಈ ಜಾಲಿಯೇ ಆಸರೆಯಾಗಿದೆ.

ಬಳ್ಳಾರಿ ಜಾಲಿ

By

Published : Oct 10, 2019, 12:54 PM IST

ಬಳ್ಳಾರಿ:ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಈ ಬಳ್ಳಾರಿ ಜಾಲಿ ಬೆಳೆದು ನಿಂತಿದೆ. ಹಂದಿ, ನಾಯಿ ಹಾಗೂ ಬಿಡಾಡಿ ದನಗಳ ಆವಾಸಸ್ಥಾನಕ್ಕೆ ಬಡಾವಣೆಗಳಲ್ಲಿನ ಮನೆಯ ಎತ್ತರಕ್ಕೆ ಬೆಳೆದು ನಿಂತಿರೋ ಈ ಜಾಲಿಯೇ ಆಸರೆಯಾಗಿದೆ.

ಹೌದು, ಮಹಾನಗರದ ಬಹುತೇಕ ಬಡಾವಣೆ ಹಾಗೂ ಕಾಲೋನಿ ಮತ್ತು ಅನಧಿಕೃತ ಬಡಾವಣೆಗಳಲ್ಲಿ ಖಾಲಿ ಇರುವ ನಿವೇಶನಗಳ ತುಂಬೆಲ್ಲಾ ಈ ಬಳ್ಳಾರಿ ಜಾಲಿಯು ಬೆಳೆದು ನಿಂತಿದೆ. ಕಳೆದೊಂದು ತಿಂಗಳಿಂದಲೂ ಮಹಾಮಳೆ ಸುರಿದ ಪರಿಣಾಮ, ಈ ಖಾಲಿ ಇರುವ ನಿವೇಶನಗಳ ತಗ್ಗು ಪ್ರದೇಶದಲ್ಲಿ ಈ ಮಳೆಯ‌ ನೀರು ಜಲಾವೃತಗೊಂಡಿದೆ. ಈ ಕಲುಷಿತ‌ ಮಳೆಯ ನೀರಿನಲ್ಲಿ ಸೊಳ್ಳೆಗಳ ಸಂತತಿ ಉತ್ಪತ್ತಿಯಾಗಿ ಇಡೀ ಬಡಾವಣೆ ಅಥವಾ ಕಾಲೊನಿಗಳಿಗೆ ಆವರಿಸುತ್ತಿವೆ. ಅದರಿಂದ ಸಾಂಕ್ರಾಮಿಕ ಕಾಯಿಲೆಗೆ ಆಸ್ಪತ್ರೆ ದಾಖಲಾಗಿರುವ ಎಷ್ಟೋ ಉದಾಹರಣೆಗಳು ಕಣ್ಮುಂದೆಯೇ ಇವೆ.

ಮಹಾನಗರಕ್ಕೆ ಅಂಟಿದ ಬಳ್ಳಾರಿ ಜಾಲಿ

ಈ ಹಿಂದೆ ಮಹಾನಗರ ಪಾಲಿಕೆ ಆಯುಕ್ತರು ಖಾಲಿ‌ ನಿವೇಶನಗಳ ಮಾಲೀಕರು ತಮ್ಮ ತಮ್ಮ ನಿವೇಶನದಲ್ಲಿ ಬೆಳೆದು ನಿಂತ ಬಳ್ಳಾರಿ ಜಾಲಿಯ ಕಟ್ಟಿಂಗ್ ಮಾಡಬೇಕೆಂಬ ಆದೇಶ ಹೊರಡಿಸಿತ್ತು. ಅದನ್ನು ಪಾಲಿಸುವಲ್ಲಿ‌ ಮಾಲೀಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಸಾಂಕ್ರಾಮಿಕ ಕಾಯಿಲೆಗೆ ಆಹ್ವಾನ ಈ ಬಳ್ಳಾರಿ ಜಾಲಿಯ ಪೊದೆಗಳು:
ಮಹಾನಗರದ ಆಯಾ ಬಡಾವಣೆಗಳಲ್ಲಿ ಕೆಲವೆಡೆ ಮನೆ ನಿರ್ಮಾಣವಾದ್ರೆ, ಅದರ ಪಕ್ಕದಲ್ಲಿಯೇ ಈ ಖಾಲಿ‌ ನಿವೇಶನ ಇದ್ದೇ ಇರುತ್ತದೆ. ಸುರಿದ ಮಹಾ ಮಳೆಗೆ ಖಾಲಿ ಇರುವ ನಿವೇಶನಗಳೆಲ್ಲವೂ ಈ ನೀರಿನಿಂದಲೂ ಜಲಾವೃತಗೊಂಡಿದ್ದು, ಅದರೊಳಗೆ ವಿಪರೀತ ಸೊಳ್ಳೆಗಳ ಸಂತತಿಯೂ ಉತ್ಪತ್ತಿಯಾಗುತ್ತಿವೆ. ಅದರಿಂದ ಸಾಂಕ್ರಾಮಿಕ ಕಾಯಿಲೆಗಳ ಆಹ್ವಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ.

ಇನ್ನು ಖಾಲಿ‌‌ ನಿವೇಶನಗಳಲ್ಲಿ ಬೆಳೆದು ನಿಂತಿರುವ ಈ 'ಬಳ್ಳಾರಿ ಜಾಲಿ‌' ಕಟ್ಟಿಂಗ್ ಮಾಡುವ ಜವಾಬ್ದಾರಿಯನ್ನು ಮಲೇರಿಯಾ‌‌ ನಿಯಂತ್ರಣ ಘಟಕವನ್ನು ಹೊಂದಿದೆ. ಆದರೀಗ ಅಲ್ಲಿ ಯಾರೊಬ್ಬ ನೌಕರರು ಕರ್ತವ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ, ಖಾಲಿ‌ ನಿವೇಶನಗಳ ಮಾಲೀಕರು ಹದ್ದುಬಸ್ತು ಮೀರಿದ್ದಾರೆ. ಇನ್ಮುಂದೆ ಖಾಲಿ ನಿವೇಶನಗಳು ಶುಚಿತ್ವಗೊಳಿಸಿಕೊಳ್ಳದೇ ಹೋದ್ರೆ ಅಂಥಹ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ನಗರದ ಶಾಸಕ ಗಾಲಿ ಸೋಮಶೇಖರ ರೆಡ್ಡಿಯವರು ಗುಟುರು ಹಾಕಿದ್ದಾರೆ.

ABOUT THE AUTHOR

...view details