ಬಳ್ಳಾರಿ: ಮಾನವ ಹಕ್ಕು ಹೆಸರು ಬಳಕೆ ಮಾಡಿಕೊಂಡು ಲೋಕೇಶ್ ಎನ್ನುವ ವ್ಯಕ್ತಿ ಗ್ರಾಮೀಣ ಭಾಗದ ರೈತರಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ, ಮೋಕ ಗ್ರಾಮದಲ್ಲಿ ಮಾನವ ಹಕ್ಕುಗಳ ಸಂಘಟನೆಯ ಹೆಸರನ್ನು ಹೇಳಿಕೊಂಡು ಸಿ.ಲೋಕೇಶ್ ಎನ್ನುವ ವ್ಯಕ್ತಿ ರೈತರ ಬಗ್ಗೆ ಬಳ್ಳಾರಿ ಜಿಲ್ಲೆಯ ಎಸ್ಪಿ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯೋದು, ರೈತರಿಗೆ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾನವ ಹಕ್ಕುಗಳ ಹೆಸರಲ್ಲಿ ರೈತರಿಗೆ ಕಿರುಕುಳ ಆರೋಪ ಕಳೆದ 90 ದಿನಗಳಿಂದ ಮುದ್ದನಗೌಡ ಅವರ ಗೋದಾವಿನಲ್ಲಿ ಮೋಕ ಗ್ರಾಮದ 6 ಜನ ರೈತರು 1800 ಚೀಲ ಭತ್ತದ ಚೀಲಗಳನ್ನು ಇಟ್ಟಿದ್ದರು. ಅದೇ ಗೋದಾಮಿನಲ್ಲಿ ಮುದ್ದನಗೌಡ ಅವರ ಮೂರು ಜನ ಅಣ್ಣ ತಮ್ಮದಿರ 1100 ಚೀಲಗಳನ್ನು ಇಡಲಾಗಿತ್ತು. ರೈತರ ಚೀಲಗಳನ್ನು ಕೊಡದೆ ಮುದ್ದನಗೌಡ ಸಹೋದರ ಮಂಜುನಾಥ್ ಗೌಡ, ಲೋಕೇಶ್ ಜೊತೆ ಸೇರಿಕೊಂಡು ರೈತರಿಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಆದರೆ ನಿನ್ನೆಯಷ್ಟೇ ಮುದ್ದನಗೌಡ ಅವರು ರೈತರ 1800 ಭತ್ತದ ಚೀಲಗಳನ್ನು ಹಿಂದಿರುಗಿಸಿದ್ದಾರೆ. ಇನ್ನುಮುಂದೆ ಈ ರೀತಿ ಸಮಸ್ಯೆ ಆಗಬಾರದು, ಎಪಿಎಂಸಿ ವ್ಯಾಪ್ತಿಗೆ ಒಳಪಡುವ ಗೋದಾಮನ್ನು ತೆರವುಗೊಳಿಸಿದ್ದೆವೆ ಎಂದು ಮುದ್ದನಗೌಡ ತಿಳಿಸಿದ್ದಾರೆ.