ಕರ್ನಾಟಕ

karnataka

ETV Bharat / state

ಬಳ್ಳಾರಿ: ಬಿಸಿಲಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ - Policy Campus of Bellary City

ಬಳ್ಳಾರಿ ನಗರದ ಪಾಲಿಕೆ ಆವರಣದಲ್ಲಿ, ರಾಜ್‌ಕುಮಾರ್ ಉದ್ಯಾನದ ಮುಂಭಾಗ ನಿಲುಗಡೆ ಮಾಡಿದ್ದ ಕುಡಿತಿನಿ ಮೂಲದ ಯುವಕನೋರ್ವನಿಗೆ ಸೇರಿದ್ದ ಪಲ್ಸರ್ ಬೈಕ್‌ನಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿತ್ತು.

bellary-fire-destroys-a-bike-parked-in-the-sun
ಬಿಸಿಲಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ

By

Published : Apr 3, 2021, 10:52 PM IST

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ಆವರಣದಲ್ಲಿ ನಿಲುಗಡೆ ಮಾಡಿದ್ದ ಬೈಕ್​ವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಶನಿವಾರ ನಡೆದಿದೆ.

ಬಿಸಿಲಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ

ಓದಿ: ಯುವರತ್ನನ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ: ಶೇ.100ರಷ್ಟು ಆಸನ ಭರ್ತಿಗೆ ಅವಕಾಶ

ಬಳ್ಳಾರಿ ನಗರದ ಪಾಲಿಕೆ ಆವರಣದಲ್ಲಿ, ರಾಜ್‌ಕುಮಾರ್ ಉದ್ಯಾನದ ಮುಂಭಾಗ ನಿಲುಗಡೆ ಮಾಡಿದ್ದ ಕುಡಿತಿನಿ ಮೂಲದ ಯುವಕನೋರ್ವನಿಗೆ ಸೇರಿದ್ದ ಪಲ್ಸರ್ ಬೈಕ್‌ನಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿದೆ. ಇದರಿಂದ ಗಾಬರಿಗೊಂಡ ಅಕ್ಕಪಕ್ಕದವರು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ.

ಆದರೆ, ಈ ವೇಳೆಗಾಗಲೇ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಕೆಳಬದಿಯಲ್ಲಿರುವ ಬಹುಪಾಲು ಭಾಗ ಸುಟ್ಟು ಕರಕಲಾಗಿತ್ತು. ಯುವಕ ರಾಜಕುಮಾರ್ ಉದ್ಯಾನಕ್ಕೆ ಬಂದಿದ್ದ, ಸುಮಾರು 2 ಗಂಟೆಗೂ ಅಧಿಕ ಕಾಲ ಬಿರುಬಿಸಿಲಿನಲ್ಲಿ ಬೈಕ್ ನಿಲ್ಲಿಸಿ ಹೋಗಿದ್ದ ಪರಿಣಾಮ, ಬಿಸಿಲಿನ ತಾಪಕ್ಕೆ ಬೆಂಕಿ ಹೊತ್ತಿಕೊಂಡಿರಬಹುದೆಂದು ತಿಳಿದುಬಂದಿದೆ.

ABOUT THE AUTHOR

...view details