ಬಳ್ಳಾರಿ: ಮಂಗಳವಾರ 399 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 14 ಜನರು ಸಾವನ್ನಪ್ಪಿದ್ದಾರೆ.
ಬಳ್ಳಾರಿಯಲ್ಲಿ 399 ಕೋವಿಡ್ ಕೇಸ್ ಪತ್ತೆ: 14 ಮಂದಿ ಸಾವು - Covid update
ಜಿಲ್ಲೆಯಲ್ಲಿ ಮಂಗಳವಾರ ಪತ್ತೆಯಾದ ಕೋವಿಡ್ ಪ್ರಕರಣಗಳ ವರದಿ ಹೀಗಿದೆ.
ಬಳ್ಳಾರಿ
ಜಿಲ್ಲೆಯಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 91,863ಕ್ಕೆ ಏರಿಕೆಯಾಗಿದ್ದರೆ, ಮೃತರ ಸಂಖ್ಯೆ 1372ಕ್ಕೆ ಏರಿಕೆಯಾಗಿದೆ. ನಿನ್ನೆ 1168 ಜನರು ಡಿಸ್ಚಾರ್ಜ್ ಆಗಿದ್ದು, ಒಟ್ಟು 82,253 ಮಂದಿ ಚೇತರಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ 8,238 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಬಳ್ಳಾರಿ-88, ಸಂಡೂರು-32, ಸಿರುಗುಪ್ಪ-30, ಹೊಸಪೇಟೆ-83, ಹೆಚ್.ಬಿ.ಹಳ್ಳಿ-66, ಕೂಡ್ಲಿಗಿ-32, ಹರಪನಹಳ್ಳಿ-43, ಹಡಗಲಿ-22, ಮತ್ತು ಹೊರ ರಾಜ್ಯದಿಂದ 1 ಹೊರ ಜಿಲ್ಲೆಯ 2 ಪ್ರಕರಣಗಳಿವೆ.