ಬಳ್ಳಾರಿ: ದೇಶದಾದ್ಯಂತ ಲಾಕ್ಡೌನ್ ಹಿನ್ನೆಲೆ ಬಡವರು ಹಾಗೂ ಅಗತ್ಯವಿರುವವರಿಗೆ ಅನೇಕರು ಸಹಾಯ ಹಸ್ತ ಚಾಚುತ್ತಿದ್ದಾರೆ. ಇದರಿಂತೆ ಜಿಲ್ಲೆಯ ನ್ಯಾಯಾಲಯದ ನ್ಯಾಯಾಧೀಶ ಅರ್ಜುನ ಎಸ್. ಮಲ್ಲೂರು ಮಹಾನಗರ ಪಾಲಿಕೆ ಆವರಣದಲ್ಲಿ ಪೌರಕಾರ್ಮಿಕರಿಗೆ ದಿನಸಿ ಕಿಟ್ಗಳನ್ನು ಉಚಿತವಾಗಿ ವಿತರಣೆ ಮಾಡಿದರು.
ಬಳ್ಳಾರಿ: ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದ ನ್ಯಾಯಾಧೀಶ - bellary districts court
ಲಾಕ್ಡೌನ್ ನಡುವೆ ಪೌರಕಾರ್ಮಿಕರು ಪ್ರತಿನಿತ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲೆಯ ಪೌರಕಾರ್ಮಿಕರು ಸೇರಿದಂತೆ ಬಡವರಿಗೆ ಇಲ್ಲಿನ ಜಿಲ್ಲಾ ನ್ಯಾಯಲಯದ ನ್ಯಾಯಾಧೀಶರು ದಿನಸಿ ಕಿಟ್ ವಿತರಿಸಿದ್ದಾರೆ.

ನಗರದ ಮಹಾನಗರ ಪಾಲಿಕೆಯ ಆವರಣದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅರ್ಜುನ್ ಮಲ್ಲೂರು, ಪೌರ ಕಾರ್ಮಿಕರು ಬೆಳಗ್ಗೆ 6 ಗಂಟೆಗೆ ಬಂದು ನಗರವನ್ನು ಸ್ವಚ್ಛ ಮಾಡುತ್ತಾರೆ. ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತಾ ದೃಷ್ಟಿಯಿಂದ ಮೊದಲು ನಗರವನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರು ಸ್ವಚ್ಛವಾಗಿರಬೇಕು. ನಿಮ್ಮ ಆರೋಗ್ಯ ಸಹ ಬಹಳ ಮುಖ್ಯ. ಆನಂತರ ನಗರ ಸ್ವಚ್ಛತೆಗೆ ಮುಂದಾಗಬೇಕು ಎಂದರು. ಲಾಕ್ಡೌನ್ ಇನ್ನೂ ಸಂಪೂರ್ಣವಾಗಿ ಸಡಲಿಕೆಯಾಗಿಲ್ಲ. ಜನರು ಸಹ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಬಳಸಬೇಕು ಎಂದರು.
ಇನ್ನು ದಿನಸಿ ಕಿಟ್ ವಿತರಣೆ ವೇಳೆ ಲಾಕ್ಡೌನ್ ಉಲ್ಲಂಘನೆಯಾಗಿದೆ.ಮಹಾನಗರ ಪಾಲಿಕೆಯ ಆವರಣದಲ್ಲಿ ನೂರಾರು ಬೈಕ್ಗಳು ನಿಲ್ಲುವುದಕ್ಕೂ ಸ್ಥಳ ಇಲ್ಲದ ಪರಿಸ್ಥಿತಿ ಎದುರಾಗಿತ್ತು ಎನ್ನಲಾಗಿದೆ.