ಬಳ್ಳಾರಿ :ಅಬಕಾರಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಗರದ ನಲ್ಲಚೆರವು ಪ್ರದೇಶದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಂಗಳವಾರ ಜಪ್ತಿ ಮಾಡಿದ್ದ ಮದ್ಯ, ಬೀರ್, ಸೇಂದಿ, ಕಳ್ಳಭಟ್ಟಿ ಸಾರಾಯಿ ಮತ್ತು ಬೆಲ್ಲದ ಕೊಳೆ ನಾಶಪಡಿಸಲಾಗಿದೆ.
ಅಬಕಾರಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಪ್ತಿ ಮಾಡಿದ್ದ ಮದ್ಯ ನಾಶ.. ಅಬಕಾರಿ ಉಪ ಅಧೀಕ್ಷಕರಾದ ಬಿ ಎಸ್ ಪೂಜಾರ, ಕೆಎಸ್ಬಿಸಿಎಲ್ ಡಿಪೋ ಮ್ಯಾನೇಜರ್, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಬಳ್ಳಾರಿ ವಲಯ ನಂಬರ್-1 ಅಧಿಕಾರಿ ಮತ್ತು ಸಿಬ್ಬಂದಿ ಸಮ್ಮುಖದಲ್ಲಿ ನಾಶಪಡಿಸಲಾಗಿದೆ.
ಓದಿ:ಗಣಿ ಜಿಲ್ಲೆಗೆ 10 ಸಾಕಾಗ್ತಿಲ್ಲ, ಇನ್ನೂ 2 ಅಗ್ನಿ ಶಾಮಕ ಠಾಣೆ ಸ್ಥಾಪನೆಗೆ ಪ್ರಸ್ತಾವನೆ
30 ಪ್ರಕರಣಗಳಲ್ಲಿ ಜಪ್ತಿ ಮಾಡಿದ 4,133 ಲೀಟರ್ ಮದ್ಯ,1007 ಲೀಟರ್ ಬೀರ್, 0. 275 ಲ್ಯಾಬ್, 1 ಲೀಟರ್ ಸೇಂದಿ,72 ಲೀಟರ್ ಕಳ್ಳಬಟ್ಟಿ, ಸರಾಯಿ ಹಾಗೂ 80 ಲೀಟರ್ ಬೆಲ್ಲದ ಕೊಳೆ ನಾಶಪಡಿಸಲಾಗಿದೆ. ಈ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.