ಕರ್ನಾಟಕ

karnataka

ETV Bharat / state

ಮಹಾನಗರ ಪಾಲಿಕೆ ಚುನಾವಣೆಗೆ ಸಕಲ ಸಿದ್ದತೆ: ಬಳ್ಳಾರಿ ಡಿಸಿ - ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ

Dc
Dc

By

Published : Apr 7, 2021, 5:56 PM IST

ಬಳ್ಳಾರಿ: ಏಪ್ರಿಲ್ 27 ರಂದು ನಡೆಯಲಿರುವ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ದತೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ತಿಳಿಸಿದ್ದಾರೆ.

ಬಳ್ಳಾರಿ ನಗರದ ಜಿಲ್ಲಾಡಳಿತ ಭವನದಲ್ಲಿ ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಡಿಸಿ ಮಾಲಪಾಟಿ ಮಾತನಾಡಿದರು.

ಬಳ್ಳಾರಿ ಪಾಲಿಕೆ ಚುನಾವಣೆಗೆ ಏಪ್ರಿಲ್ 8 ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆ ದಿನದಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ಏಪ್ರಿಲ್ 15 ಕ್ಕೆ ನಾಪಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ಬಳ್ಳಾರಿ ನಗರದಲ್ಲಿ 3 ಲಕ್ಷದ 40 ಸಾವಿರದ 882 ಜನ ಮತದಾರರಿದ್ದಾರೆ. ಚುನಾವಣೆ ನಡೆಯುವ 39 ವಾರ್ಡ್ ಗಳಿಗೆ 8 ರಿಟರ್ನಿಂಗ್ ಆಫೀಸರ್ ಗಳ ನಿಯೋಜನೆ ಮಾಡಲಾಗಿದೆ.

ಈಗಾಗಲೇ ವೋಟರ್ ಲಿಸ್ಟ್ ಫೈನಲ್ ಆಗಿದೆ. ಅಧಿಕಾರಿಗಳು ಹಾಗೂ ಚುನಾವಣೆ ಪ್ರಕ್ರಿಯೆ‌ ನಡೆಸಲು‌ ಅಗತ್ಯ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ‌. ಒಟ್ಟಾರೆಯಾಗಿ 344 ಮತ ಗಟ್ಟೆಗಳನ್ನ‌ ಸ್ಥಾಪನೆ ಮಾಡಲಾಗಿದೆ ಎಂದರು.

ಈ‌ ವೇಳೆ ಎಸ್ಪಿ ಸೈದುಲು ಅಡಾವತ್ ಮಾತನಾಡಿ, ಕಾರ್ಪೋರೇಷನ್ ಲಿಮಿಟ್ ನಲ್ಲಿ 900 ಜನ ರೌಡಿಶೀಟರ್ ಇದ್ದಾರೆ. ಇವರೆಲ್ಲರ ಮೇಲೆ ನಿಗಾ ಇಡಲಾಗಿದೆ ಎಂದರು. ಎಡಿಸಿ ಮಂಜುನಾಥ, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್​ ಇದ್ದರು.

ABOUT THE AUTHOR

...view details