ಕರ್ನಾಟಕ

karnataka

ETV Bharat / state

ಬೆಂಬಲಬೆಲೆ ಯೋಜನೆಯಡಿ ಕಡಲೆಕಾಳು ಖರೀದಿ ಕೇಂದ್ರ ಆರಂಭ : ಡಿಸಿ ಮಾಲಪಾಟಿ

ಮೇ 14ರವರೆಗೆ ಕಡಲೆಕಾಳು ಖರೀದಿ ಮಾಡಲಾಗುತ್ತದೆ. ಕೋವಿಡ್ ಹರಡುವಿಕೆಯ ಹಿನ್ನೆಲೆ ರೈತರು ಸಾಮಾಜಿಕ ಅಂತರ ಮತ್ತು ನೈರ್ಮಲ್ಯ ಕಾಪಾಡುವುದರ ಮೂಲಕ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು..

peanut Buying Center under Support Price Scheme
ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ

By

Published : Feb 19, 2021, 10:35 AM IST

ಬಳ್ಳಾರಿ :ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತದಿಂದ ಎಫ್​ಎಕ್ಯೂ ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು 2020-21ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಿದೆ.

ಹೀಗಾಗಿ, ಪ್ರತಿ ಕ್ವಿಂಟಲ್‍ಗೆ ₹5100ನಂತೆ ರೈತರಿಂದ ಬೆಳೆ ಖರೀದಿ ಮಾಡಲು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ರೈತರು ಬೆಂಬಲ ಬೆಲೆ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿಯೂ ರೈತರು ಮಧ್ಯವರ್ತಿಗಳ ಮೊರೆ ಹೋಗಬಾರದು. ಇದರ ಸದುಪಯೋಗವನ್ನು ರೈತರೇ ನೇರ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಖರೀದಿ ಕೇಂದ್ರಗಳ ವಿವರ :

  • ಬಳ್ಳಾರಿಯಲ್ಲಿ ರೈತ ಸೇವಾ ಸಹಕಾರ ಸಂಘ ನಿಯಮಿತ (ಮಹ್ಮದ್ ಇಕ್ಬಾಲ್-9741707031)
  • ಸಿರುಗುಪ್ಪದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ-01 (ಸಿ.ಬಸವರಾಜ-9845166601)
  • ಹೂವಿನಹಡಗಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಜಿ.ಕೆ.ಕೊಟ್ರೇಶ್-9972356911)

ರೈತರು ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಮಾರಾಟ ಮಾಡಲು ರೈತರು ತಮ್ಮ ಹೆಸರನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿರಬೇಕು. ಎಫ್ಐ​ಡಿಯನ್ನು ಪಡೆಯುವುದು ಕಡ್ಡಾಯ. ರೈತರ ಬಳಿ ಫ್ರೂಟ್ಸ್ ಐಡಿ ಇಲ್ಲದಿದ್ದಲ್ಲಿ ಅಥವಾ ಫ್ರೂಟ್ಸ್​ನಲ್ಲಿ ಯಾವುದಾದರು ತಾಂತ್ರಿಕ ದೋಷವಿದ್ದಲ್ಲಿ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರ ನೀಡಬೇಕು. ಬ್ಯಾಂಕ್ ಖಾತೆ(ಆಧಾರ್ ಕಾರ್ಡ್‍ನೊಂದಿಗೆ ಜೋಡಣೆಗೊಂಡ) ಪುಸ್ತಕದ ನಕಲು ಪ್ರತಿ ನೀಡುವುದು ಕಡ್ಡಾಯ. ರೈತರು ಏ.30ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಅದರ ಚೀಟಿ ಪಡೆಯಬೇಕು. ಮೇ 14ರವರೆಗೆ ಕಡಲೆಕಾಳು ಖರೀದಿ ಮಾಡಲಾಗುತ್ತದೆ. ಕೋವಿಡ್ ಹರಡುವಿಕೆಯ ಹಿನ್ನೆಲೆ ರೈತರು ಸಾಮಾಜಿಕ ಅಂತರ ಮತ್ತು ನೈರ್ಮಲ್ಯ ಕಾಪಾಡುವುದರ ಮೂಲಕ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತದ ಶಾಖಾ ವ್ಯವಸ್ಥಾಪಕ ಮಸ್ತಾನ್ ಎಸ್​ ಅವರ ದೂ.ಸಂ; 08392-267202 ಮತ್ತು ಬಳ್ಳಾರಿ ಖರೀದಿ ಕೇಂದ್ರದ ಮಹಮ್ಮದ್ ಇಕ್ಬಾಲ್ ಮೊ.ಸಂ:9741707031, ಸಿರುಗುಪ್ಪ ಖರೀದಿ ಕೇಂದ್ರದ ಸಿ.ಬಸವರಾಜ್ ಅವರ ಮೊ. ಸಂ:9845166601 ಹಾಗೂ ಹೂವಿನಹಡಗಲಿಯ ಖರೀದಿ ಕೇಂದ್ರದ ಜಿ.ಕೆ.ಕೊಟ್ರೇಶ್ ಮೊ.ಸಂ:9972356911 ಇವರನ್ನು ಸಂಪರ್ಕಿಸಲು ಸೂಚಿಸಿದೆ.

ABOUT THE AUTHOR

...view details