ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದ ಸ್ನೇಹಾ (13) ಎಂಬ ಬಾಲಕಿ ಸಾವನ್ನಪ್ಪಿದ್ದು ಡೆಂಗ್ಯೂ ಜ್ವರದಿಂದಲ್ಲ. ಆಕೆಗೆ ಡೆಂಗ್ಯೂ ಟೆಸ್ಟ್ ಆಗಿರಲಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಹೆಚ್.ಎಲ್. ಜನಾರ್ದನ ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿಯ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿನಡೆಸಿ ಮಾತನಾಡಿದ ಅವರು, ಸಂಡೂರು ಪಟ್ಟಣದ ಬಾಲಕಿ ಸ್ನೇಹಾಳಿಗೆ ಜ್ವರ ಕಾಣಿಸಿಕೊಂಡ ಕೂಡಲೇ ನೇರವಾಗಿ ಸಂಡೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆ ಬಳಿಕ, ಹೊಸಪೇಟೆ ಖಾಸಗಿ ಆಸ್ಪತ್ರೆಗೆ ಬಾಲಕಿಯನ್ನ ಕರೆ ತರಲಾಗಿತ್ತು. ಅಲ್ಲಿಂದ ಕೃತಕ ಉಸಿರಾಟದೊಂದಿಗೆ ಆ್ಯಂಬುಲೆನ್ಸ್ ವಾಹನದಲ್ಲಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆ ತರಲಾಯಿತು. ಎಲ್ಲೂ ಕೂಡ ಆಕೆಗೆ ಈ ಡೆಂಗ್ಯೂ ಜ್ವರದ ಟೆಸ್ಟ್ ಮಾಡಿರಲಿಲ್ಲ. ಅಂತಹ ಗುಣಲಕ್ಷಣಗಳೂ ಕಂಡು ಬಂದಿರಲಿಲ್ಲ. ಹೀಗಾಗಿ, ಆಕೆ ಸಾವನ್ನಪ್ಪಿರೋದು ಡೆಂಗ್ಯೂ ಜ್ವರದಿಂದಲ್ಲ. ಹಾಗಂತ ಆಕೆಗೆ ಚಿಕಿತ್ಸೆ ನೀಡಿದ ವೈದ್ಯರೇ ಮಾಹಿತಿ ನೀಡಿದ್ದಾರೆ ಎಂದು ಡಿಹೆಚ್ಒ ಜನಾರ್ದನ ತಿಳಿಸಿದ್ದಾರೆ.