ಬಳ್ಳಾರಿ :ಕೋವಿಡ್-19 ಹಿನ್ನೆಲೆ ಸಾರ್ವಜನಿಕರು ಮತ್ತು ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ವಿವಿಧೆಡೆ ಫೆ.27ರಂದು ನಡೆಯುವ ಜಾತ್ರಾ ಮಹೋತ್ಸವಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.
ಫೆ.27ರಂದು ಹೂವಿನಹಡಗಲಿ ತಾಲೂಕಿನ ಮಾನ್ಯರಮಸಾಲವಾಡ ಗ್ರಾಮದಲ್ಲಿ ನಡೆಯುವ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವ, ಹರಪನಹಳ್ಳಿ ತಾಲೂಕಿನ ಉಚ್ಚೆಂಗಿದುರ್ಗ ಗ್ರಾಮದಲ್ಲಿ ಫೆ.27ರಂದು ಶ್ರೀ ಉತ್ಸವಾಂಭ ದೇವಸ್ಥಾನದ ವಾರ್ಷಿಕ ಭರತ ಹುಣ್ಣಿಮೆ ಪ್ರಯುಕ್ತ ನಡೆಯುವ ರಥೋತ್ಸವ, ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಶ್ರೀಉತ್ತಿನ ಯಲ್ಲಮ್ಮ ದೇವಸ್ಥಾನದ ವಾರ್ಷಿಕ ಭರತ ಹುಣ್ಣಿಮೆ ಪ್ರಯುಕ್ತ ನಡೆಯುವ ರಥೋತ್ಸವಕ್ಕೆ, ನಗರದ ಕೋಟೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ, ಸಂಡೂರು ತಾಲೂಕಿನ ಗೆಣತಿಕಟ್ಟೆ ಗ್ರಾಮದಲ್ಲಿ ನಡೆಯುವ ಶ್ರೀ ಆಂಜಿನೇಯ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.
ಇದನ್ನು ಓದಿ: ಯಲಹಂಕ-ಮಾಕಳಿದುರ್ಗ ಮಧ್ಯೆ ವಿದ್ಯುದೀಕೃತ ಜೋಡಿ ಮಾರ್ಗ ಸಂಚಾರಕ್ಕೆ ಸಿದ್ದ