ಬಳ್ಳಾರಿ :ಜಿಲ್ಲೆಯಲ್ಲಿ ಪತ್ತೆಯಾದ 6 ಕೊರೊನಾ ಪಾಸಿಟಿವ್ ಪ್ರಕರಣಗಳ ಪೈಕಿ ಮೊದಲನೇ ಹಂತದ ಪರೀಕ್ಷೆಯಲ್ಲಿ ವ್ಯಕ್ತಿಯೋರ್ವನಿಗೆ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
6 ಪಾಸಿಟಿವ್ ಕೇಸ್‌ಗಳ ಪೈಕಿ ಮೊದಲನೇ ಪರೀಕ್ಷೆಯಲ್ಲಿ ಓರ್ವನಿಗೆ ನೆಗೆಟಿವ್: ಬಳ್ಳಾರಿ ಡಿಸಿ - ಬಳ್ಳಾರಿ ಡಿಸಿ ಲೇಟೆಸ್ಟ್ ಪ್ರೆಸ್ಮೀಟ್
ಉಳಿದಂತೆ ಗುಗ್ಗರಹಟ್ಟಿಯಲ್ಲಿ ಈಗಾಗಲೇ ಫೀವರ್ ಕ್ಲಿನಿಕ್ ಸ್ಥಾಪನೆ ಮಾಡಲಾಗಿದೆ. ಆ ಭಾಗದವರನ್ನ ಫೀವರ್ ಕ್ಲಿನಿಕಲ್ ಚೆಕ್ ಅಪ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಸಿಟಿವ್ ಪ್ರಕರಣದ ಆರು ಮಂದಿಯನ್ನೂ ಕೂಡ ಮೊದಲ ಹಂತದ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಹಂತದ ಪರೀಕ್ಷೆಯಲ್ಲಿ ಒಬ್ಬರಿಗೆ ನೆಗೆಟಿವ್ ಅಂತಾ ಬಂದಿದೆ. ಇನ್ನೆರಡು ಪರೀಕ್ಷೆಗಳು ಬಾಕಿ ಇವೆ. ಆ ಬಳಿಕ ಪೂರ್ಣಪ್ರಮಾಣದ ಚಿತ್ರಣ ಗೊತ್ತಾಗಲಿದೆ ಎಂದು ಡಿಸಿ ನಕುಲ್ ತಿಳಿಸಿದ್ರು. ಉಳಿದಂತೆ ಗುಗ್ಗರಹಟ್ಟಿಯಲ್ಲಿ ಈಗಾಗಲೇ ಫೀವರ್ ಕ್ಲಿನಿಕ್ ಸ್ಥಾಪನೆ ಮಾಡಲಾಗಿದೆ. ಆ ಭಾಗದವರನ್ನ ಫೀವರ್ ಕ್ಲಿನಿಕಲ್ ಚೆಕ್ ಅಪ್ ಮಾಡಲಾಗಿದೆ ಎಂದರು.
ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಕ್ವಾರೈಂಟೈನ್‌ನಲ್ಲಿರುವ ತಬ್ಲಿಘಿ ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು ಮಸಾಲ ಪದಾರ್ಥ ಆಹಾರ ಪೂರೈಕೆಗೆ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ದಾನಿಗಳಿಂದ ಆಹಾರ ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಡಿಸಿ ನಕುಲ್ ತಿಳಿಸಿದರು.