ಬಳ್ಳಾರಿ: ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಹಮಾಲಿ ಕಾರ್ಮಿಕರಿಗೆ ಕನಿಷ್ಠ ಕೂಲಿ ನಿಗದಿಯಾಗಿಲ್ಲ. ದಲ್ಲಾಳಿ ವರ್ತಕರು ನೀಡುವ ಮುಷ್ಠಿ ದವಸ- ಧಾನ್ಯವೇ ಅವರಿಗೆ ಕನಿಷ್ಠ ಕೂಲಿಯಾಗಿದೆಂದು ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಹಿಳಾ ಹಮಾಲಿ ಕಾರ್ಮಿಕರ ಸಂಘವು ಆಕ್ರೋಶ ವ್ಯಕ್ತಪಡಿಸಿದೆ.
ಮಹಿಳಾ ಹಮಾಲಿ ಕಾರ್ಮಿಕರಿಗೆ ಮುಷ್ಠಿ ಧಾನ್ಯವೇ ಕನಿಷ್ಠ ಕೂಲಿ: ಕಾರ್ಮಿಕರ ಸಂಘ ಆಕ್ರೋಶ - ಬಳ್ಳಾರಿ ಇತ್ತೀಚಿನ ಸುದ್ದಿ
ಸಕಾಲದಲ್ಲಿ ಮಹಿಳಾ ಹಮಾಲಿ ಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡಿ, ಕಾಯಕ ನಿಧಿ ಯೋಜನೆ ಅಡಿಯಲ್ಲಿ ನಿಯಮಿತವಾಗಿ ಪಾವತಿಸಬೇಕು. 2016 ರಿಂದ ಪಾವತಿಸದೇ ಇರುವ ವಿಮಾ ಯೋಜನೆಯನ್ನ ಮುಂದುವರಿಸಬೇಕು ಎಂದು ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಹಿಳಾ ಹಮಾಲಿ ಕಾರ್ಮಿಕರ ಸಂಘ ಒತ್ತಾಯಿಸಿದೆ.
ನಗರದ ಪತ್ರಿಕಾ ಭವನದಲ್ಲಿಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಹಂಪೇರು ಆಲೇಶ್ವರ ಗೌಡ, ಕನಿಷ್ಠ ಕೂಲಿಯೂ ಇಲ್ಲದೇ, ಮುಷ್ಠಿ ಧಾನ್ಯವೇ ಇವರ ದಿನಗೂಲಿ ಅಥವಾ ಕನಿಷ್ಠ ಕೂಲಿ ಆಗಿದೆ. ಹೀಗಾಗಿ, ಈ ಎಪಿಎಂಸಿ ಮಾರುಕಟ್ಟೆಯಲ್ಲಿ ಅಂದಾಜು 500ಕ್ಕೂ ಅಧಿಕ ಮಂದಿ ಮಹಿಳಾ ಹಮಾಲಿ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಕೇವಲ 300ಕ್ಕೂ ಅಧಿಕ ಮಂದಿ ಮಾತ್ರ ಹಮಾಲಿ ಕಾರ್ಮಿಕರೆಂದು ಪರವಾನಗಿ ಪಡೆದಿದ್ದು, ಉಳಿದವರಿಗೆ ಹಮಾಲಿ ಕಾರ್ಮಿಕರ ಪರವಾನಗಿ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸಕಾಲದಲ್ಲಿ ಮಹಿಳಾ ಹಮಾಲಿ ಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡಬೇಕು. ಅಲ್ಲದೇ, ಪ್ರತ್ಯೇಕವಾಗಿ ಮಹಿಳಾ ಹಮಾಲಿ ಕಾರ್ಮಿಕರಿಗೆ ಶ್ರಮಿಕರ ಭವನವನ್ನ ನಿರ್ಮಿಸಿಕೊಡಬೇಕು. ಕಾಯಕ ನಿಧಿ ಯೋಜನೆ ಅಡಿಯಲ್ಲಿ ನಿಯಮಿತವಾಗಿ ಪಾವತಿಸಬೇಕು. 2016 ರಿಂದ ಪಾವತಿಸದೇ ಇರುವ ವಿಮಾ ಯೋಜನೆಯನ್ನ ಮುಂದುವರಿಸಬೇಕು. ಕನಿಷ್ಠ ಕೂಲಿಯನ್ನ ರಾಜ್ಯ ಸರ್ಕಾರ ನಿಗದಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.