ಬಳ್ಳಾರಿ:ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ನಿನ್ನೆ 927 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 19 ಜನರು ಸಾವನ್ನಪ್ಪಿದ್ದಾರೆ.
ಬಳ್ಳಾರಿಯಲ್ಲಿ 927 ಕೋವಿಡ್ ಕೇಸ್ ಪತ್ತೆ: 19 ಸೋಂಕಿತರು ಸಾವು - bellary covid updates
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕೋವಿಡ್ ವರದಿ ಹೀಗಿದೆ..
ಬಳ್ಳಾರಿ ಕೋವಿಡ್ ಅಪ್ಡೇಟ್
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 57,128ಕ್ಕೇರಿದ್ದು, ಮೃತರ ಸಂಖ್ಯೆ 812ಕ್ಕೆ ಏರಿಕೆಯಾಗಿದೆ. ಬುಧವಾರ 739 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 44,685 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 1,631 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಬಳ್ಳಾರಿ-336, ಸಂಡೂರು-154, ಸಿರುಗುಪ್ಪ-21, ಹೊಸಪೇಟೆ-144, ಹೆಚ್.ಬಿ.ಹಳ್ಳಿ-58, ಕೂಡ್ಲಿಗಿ-43, ಹರಪನಹಳ್ಳಿ-93 ಹಾಗೂ ಹಡಗಲಿಯಲ್ಲಿ-78 ಸಕ್ರಿಯ ಪ್ರಕರಣಗಳಿವೆ.