ಬಳ್ಳಾರಿ:ರಾಜ್ಯವ್ಯಾಪಿ ಮುಂದಿನ 14 ದಿನಗಳ ಕಾಲ ಕರೆ ನೀಡಿರುವ ಕೊರೊನಾ ನಿಯಂತ್ರಣದ ಲಾಕ್ಡೌನ್ ಹಿನ್ನೆಲೆ ಬಳ್ಳಾರಿ ಮಹಾನಗರದಲ್ಲಿ ಬಂಬೂ ಮತ್ತು ಕಟ್ಟಿಗೆಯಿಂದ ಬ್ಯಾರಿಕೇಡ್ ಅಳವಡಿಸಲು ಕೊನೆಗೂ ಬಳ್ಳಾರಿ ಮಹಾನಗರ ಪಾಲಿಕೆ ಮುಂದಾಗಿದೆ.
ನಗರದಲ್ಲಿ ಬಂಬೂ ಬ್ಯಾರಿಕೇಡ್ ಹಾಕಲು ಮುಂದಾದ ಬಳ್ಳಾರಿ ಪಾಲಿಕೆ... ಇದು ಈಟಿವಿ ಭಾರತ ಇಂಪ್ಯಾಕ್ಟ್! - ಬಂಬೂ ಬ್ಯಾರಿಕೇಡ್,
ಕೊನೆಗೂ ಎಚ್ಚತ್ತ ಬಳ್ಳಾರಿ ಮಹಾನಗರ ಪಾಲಿಕೆ, ನಗರದಲ್ಲಿ ಬಂಬೂ ಬ್ಯಾರಿಕೇಡ್ ಹಾಕಲು ಮುಂದಾಗಿದೆ.
ಈ ಬಗ್ಗೆ ಈಟಿವಿ ಭಾರತ ‘ಲಾಕ್ಡೌನ್ಗೆ ಪೂರ್ವ ತಯಾರಿ ಮಾಡಿಕೊಳ್ಳದ ಪಾಲಿಕೆ: ನಗರದಲ್ಲಿ ಬ್ಯಾರಿಕೇಡ್ ಹಾಕಲು ಹಿಂದೇಟು’ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟಿಸಿತ್ತು. ಅದನ್ನ ಸೂಕ್ಷ್ಮವಾಗಿ ಗಮನಿಸಿದ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಬಳ್ಳಾರಿ ಮಹಾನಗರದ ಪ್ರಮುಖ ರಸ್ತೆಗಳು ಸೇರಿದಂತೆ ನಗರದಲ್ಲಿ ಬಂಬೂ ಮತ್ತು ಕಟ್ಟಿಗೆಯಿಂದ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದಾರೆ.
ನಿನ್ನೆಯಿಂದಲೇ ನಗರದ ಪ್ರಮುಖ ರಸ್ತೆಗಳಾದ ಗಡಿಗಿ ಚನ್ನಪ್ಪ, ಮೋತಿ ವೃತ್ತ, ಎಸ್ಪಿ ವೃತ್ತ ಹಾಗೂ ಬೆಂಗಳೂರು ರಸ್ತೆ ಸೇರಿದಂತೆ ನಾನಾ ಕಡೆಗಳಲ್ಲಿ ಈ ಬಂಬೂ ಮತ್ತು ಕಟ್ಟಿಗೆಯ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಇಂದು ಸಹ ಇದರ ಕಾರ್ಯ ಮುಂದುವರೆಯಲಿದೆ.