ಬಳ್ಳಾರಿ: ಮಹಾನಗರ ಪಾಲಿಕೆ ಆಯುಕ್ತೆ ಮೂರು ಟ್ರ್ಯಾಕ್ಟರ್ಗಳಲ್ಲಿ ಪ್ಲಾಸ್ಟಿಕ್ ಪೇಪರ್, ಬ್ಯಾಗ್, ಕಪ್ಗಳನ್ನು ಸೀಸ್ ಮಾಡಿ, 25 ಸಾವಿರ ರೂ. ದಂಡ ಹಾಕಿದ ಘಟನೆ ಹೂವಿನ ಬಜಾರ್ನಲ್ಲಿ ನಡೆದಿದೆ.
ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡ ಪಾಲಿಕೆ ಗಣಿನಾಡು ಬಳ್ಳಾರಿ ನಗರದ ಹೂವಿನ ಬಜಾರ್ ಎದುಗಡೆ ಇರುವ ಗ್ರಹಾಂ ರಸ್ತೆಯಲ್ಲಿ ಇರುವ ಹಲವಾರು ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ ಪ್ಲಾಸ್ಟಿಕ್ ಪೇಪರ್, ಬ್ಯಾಗ್, ಕಪ್ಗಳನ್ನು ಸೀಸ್ ಮಾಡಿದರು.
ಈ ಸಮಯದಲ್ಲಿ ಈಟಿವಿ ಭಾರತದ ಪ್ರತಿನಿಧಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ, ಆಯುಕ್ತೆ ತುಷಾರಮಣಿ ಅವರು, ಬಹಳ ದಿನಗಳ ನಂತರ ಮತ್ತೆ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ಪೇಪರ್, ಬ್ಯಾಗ್, ಕಪ್ಗಳನ್ನು ವಶಪಡಿಸಿಕೊಂಡಿದ್ದೇವೆ. ಒಟ್ಟು ಮೂರು ಟ್ರ್ಯಾಕ್ಟರ್ಗಳಲ್ಲಿ ಪ್ಯಾಸ್ಟಿಕ್ ಪೇಪರ್, ಬ್ಯಾಗ್, ಕಪ್ಗಳನ್ನು ಸೀಜ್ ಮಾಡಿ, 25 ಸಾವಿರ ರೂ. ದಂಡವನ್ನು ಸಹಾ ಹಾಕಿದ್ದೇವೆ ಎಂದರು.
ಈ ಸಮಯದಲ್ಲಿ ಮಹಾನಗರ ಪಾಲಿಕೆಯ ಹೆಲ್ತ್ ಇನ್ಸ್ಪೆಕ್ಟರ್ಗಳು ಹಾಜರಿದ್ದರು.