ಕರ್ನಾಟಕ

karnataka

ETV Bharat / state

ಬಳ್ಳಾರಿ: ಪಕ್ಷೇತರ ಅಭ್ಯರ್ಥಿಗೆ ಜೈ ಎಂದ ಕೈ ಅಭ್ಯರ್ಥಿ! - ಪಕ್ಷೇತರ ಅಭ್ಯರ್ಥಿಗೆ ನಾಗರಾಜ್ ಸಪೋರ್ಟ್

ಪಕ್ಷೇತರ ಅಭ್ಯರ್ಥಿ ಮಂಜುಳಾ ಉಮಾಪತಿ ಅವರ‌‌ ಪರವಾಗಿ ಪ್ರಚಾರ ನಡೆಸಿರೋದಕ್ಕೆ ವ್ಯಾಪಕ ವಿರೋಧವನ್ನ ಚಾಮುಂಡೇಶ್ವರಿ ನಾಗರಾಜ ಅವರು ವ್ಯಕ್ತಪಡಿಸಿದ್ದರು. ಆದರೀಗ ತಮ್ಮ ವರಸೆ ಬದಲಿಸಿ ಪಕ್ಷೇತರ ಅಭ್ಯರ್ಥಿಗೆ ತಮ್ಮ ಬೆಂಬಲ ಸೂಚಿಸುವುದಾಗಿ ನಾಗರಾಜ ತಿಳಿಸಿದ್ದಾರೆ.

Bellary
Bellary

By

Published : Apr 26, 2021, 7:02 PM IST

ಬಳ್ಳಾರಿ: ಮಹಾನಗರ ಪಾಲಿಕೆ ವ್ಯಾಪ್ತಿಯ 32ನೇ ವಾರ್ಡ್​​​ನ ಕಾಂಗ್ರೆಸ್ ಅಭ್ಯರ್ಥಿ ಚಾಮುಂಡೇಶ್ವರಿ ನಾಗರಾಜರವರು ಪಕ್ಷೇತರ ಅಭ್ಯರ್ಥಿ ಮಂಜುಳಾ ಉಮಾಪತಿ ಅವರಿಗೆ ಬೆಂಬಲ ಸೂಚಿಸಿ ಸ್ಪರ್ಧಾ ಕಣದಿಂದ ಹಿಂದೆ ಸರಿಯೋದಾಗಿ ತಿಳಿಸಿದ್ದಾರೆ.

ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರ ಮಾವ ಎರಿಸ್ವಾಮಿ ಹಾಗೂ 31ನೇ ವಾರ್ಡಿನ ಅಭ್ಯರ್ಥಿ ಬಿ.ಶ್ವೇತಾ ಅವರ ಪತಿ ಸೋಮು ಅವರು 32ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಮಂಜುಳಾ ಉಮಾಪತಿ ಅವರ‌‌ ಪರವಾಗಿ ಪ್ರಚಾರ ನಡೆಸಿರೋದಕ್ಕೆ ವ್ಯಾಪಕ ವಿರೋಧವನ್ನ ಚಾಮುಂಡೇಶ್ವರಿ ನಾಗರಾಜ ಅವರು ವ್ಯಕ್ತಪಡಿಸಿದ್ದರು. ಆದರೀಗ ತಮ್ಮ ವರಸೆ ಬದಲಿಸಿ ಪಕ್ಷೇತರ ಅಭ್ಯರ್ಥಿಗೆ ತಮ್ಮ ಬೆಂಬಲ ಸೂಚಿಸೋದಾಗಿ ನಾಗರಾಜ ತಿಳಿಸಿದ್ದಾರೆ.

32ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಚಾಮುಂಡೇಶ್ವರಿ ನಾಗರಾಜ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಬಂಡಿಹಟ್ಟಿಯ ಗ್ರಾಮದೇವತೆ ರಾಮುಲಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಿದ್ದಾರೆ. ಬಳಿಕ, ಆ ವಾರ್ಡ್​​​ನ ಸಮುದಾಯದ ಹಿರಿಯರ ಸಲಹೆ ಮೇರೆಗೆ ಪಕ್ಷೇತರ ಅಭ್ಯರ್ಥಿ ಮಂಜುಳಾ ಉಮಾಪತಿಗೆ ಬೆಂಬಲ ಸೂಚಿಸುತ್ತಿರೋದಾಗಿ ಕಾಂಗ್ರೆಸ್ ಅಭ್ಯರ್ಥಿಯ ಪತಿ ನಾಗರಾಜ ಘಂಟಾ ಘೋಷವಾಗಿ ಘೋಷಿಸಿಕೊಂಡಿದ್ದಾರೆ.

ABOUT THE AUTHOR

...view details