ಬಳ್ಳಾರಿ:ಮಹಾನಗರದ ಲಾಲ್ ಕಮಾನ್ ಪ್ರದೇಶ ವ್ಯಾಪ್ತಿಯಲ್ಲಿನ ದಶಕದ ಕುಡಿಯುವ ನೀರಿನ ಟ್ಯಾಂಕನ್ನು ಬಳ್ಳಾರಿ ಮಹಾನಗರ ಪಾಲಿಕೆಯು ನೆಲಕ್ಕುರುಳಿಸಿದೆ.
ಬಳ್ಳಾರಿ: ದಶಕದ ಹಿಂದಿನ ನೀರಿನ ಟ್ಯಾಂಕ್ ನೆಲಕ್ಕುರುಳಿಸಿದ ಮಹಾನಗರ ಪಾಲಿಕೆ - Bellary News
ಮಹಾನಗರದ ಲಾಲ್ ಕಮಾನ್ ಪ್ರದೇಶ ವ್ಯಾಪ್ತಿಯಲ್ಲಿನ ದಶಕದ ಕುಡಿಯುವ ನೀರಿನ ಟ್ಯಾಂಕ್ನ್ನ ಬಳ್ಳಾರಿ ಮಹಾನಗರ ಪಾಲಿಕೆಯು ನೆಲಕ್ಕುರುಳಿಸಿದೆ.
![ಬಳ್ಳಾರಿ: ದಶಕದ ಹಿಂದಿನ ನೀರಿನ ಟ್ಯಾಂಕ್ ನೆಲಕ್ಕುರುಳಿಸಿದ ಮಹಾನಗರ ಪಾಲಿಕೆ](https://etvbharatimages.akamaized.net/etvbharat/prod-images/768-512-4916341-thumbnail-3x2-sow.jpg)
ಲಾಲ್ ಕಮಾನ್ ಪ್ರದೇಶದ ನಿವಾಸಿಗಳು ನೀಡಿರುವ ಮನವಿ ಮೇರೆಗೆ ಬಳ್ಳಾರಿ ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರ ಸಮಕ್ಷಮದಲ್ಲಿ ಪಾಲಿಕೆ ಈ ಟ್ಯಾಂಕನ್ನ ನೆಲಕ್ಕುರುಳಿಸಿದೆ. ದೊಡ್ಡದಾದ ಕಂಪೌಂಡ್ ಒಳಗಡೆ ಕಳೆದ 35 ವರ್ಷಗಳ ಹಿಂದೆಯೇ ಈ ಟ್ಯಾಂಕ್ ಅನ್ನು ನಿರ್ಮಿಸಲಾಗಿತ್ತಾದರೂ ಅದರ ಆಯುಸ್ಸು ಮುಗಿದಿತ್ತು. ಟ್ಯಾಂಕ್ ಬಳಿ ತೆರಳುವವರು ಜೀವ ಕೈಯಲ್ಲೇ ಹಿಡಿದುಕೊಂಡೇ ಹೋಗುತ್ತಿದ್ದರು. ಆದರೀಗ, ಟ್ಯಾಂಕ್ನ್ನ ನೆಲಕ್ಕುರುಳಿಸಿದರಿಂದ ಅಲ್ಲಿನ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಅಲ್ಲದೇ, ಕುಡಿಯುವ ನೀರಿನ ಟ್ಯಾಂಕ್ ನೆಲಕ್ಕುರುಳಿಸಿದ ವಿಡಿಯೋವನ್ನ ಬಳ್ಳಾರಿ ಮೇರಿ ಜಾನ್ ಫೇಸ್ಬುಕ್ ಖಾತೆಯಲ್ಲಿ ಹರಿಬಿಡಲಾಗಿದೆ.