ಬಳ್ಳಾರಿ:ರಾಜ್ಯದ ಮಟ್ಟದ ಈಜು ಸ್ಪರ್ಧೆಯಲ್ಲಿ ನಗರದ ಆರು ಮಕ್ಕಳು ಒಟ್ಟು 14 ಪದಕಗಳನ್ನು ಪಡೆದುಕೊಂಡಿದ್ದು, ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಈಜು ತರಬೇತಿದಾರ ಎರಿಸ್ವಾಮಿ, ಇತ್ತೀಚೆಗೆ ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ವಿದ್ಯಾನಿಕೇತನ ಮತ್ತು ಎಲೈಟ್ ಸ್ಪೋರ್ಟ್ಸ್ ಅಕಾಡೆಮಿ ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ 'ಸ್ವಿಮ್‌ಬಜ್-2020'ನಲ್ಲಿ ಬಳ್ಳಾರಿಯಿಂದ 6 ಮಕ್ಕಳು ಭಾಗವಹಿಸಿ 14 ಪದಕಗಳನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ ಒಬ್ಬರು ಚಾಂಪಿಯನ್ ಆಗಿದ್ದು, ಮತ್ತೊಬ್ಬರು ಅತ್ಯುತ್ತಮ ಈಜುಪಟುವಾಗಿ ಆಯ್ಕೆಯಾದರು.
ಫ್ರೀ ಸ್ಟೈಲ್ನಲ್ಲಿ ದಿವ್ಯ 50 ಮೀಟರ್, 100 ಮೀಟರ್‌ನಲ್ಲಿ ಮತ್ತು ಬ್ಯಾಕ್ ಸ್ಟ್ರೋಕ್ 50 ಮೀಟರ್‌ನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಖುಷಿ 100 ಮೀಟರ್ ಫ್ರೀ ಸ್ಟೈಲ್ನಲ್ಲಿ ಮತ್ತು ಬ್ಯಾಕ್ ಸ್ಟ್ರೋಕ್‌ನಲ್ಲಿ ಕಂಚು ಪಡೆದುಕೊಂಡಿದ್ದಾರೆ.
ಲಿಪಿಕಾ 50 ಮೀರ್ನಲ್ಲಿ ಫ್ರೀ ಸ್ಟೈಲ್ನಲ್ಲಿ ಬೆಳ್ಳಿ ಪದಕ ಮತ್ತು ಬ್ಯಾಕ್ ಸ್ಟ್ರೋಕ್‌ನಲ್ಲಿ ಬಂಗಾರದ ಪದಕ ಪಡೆದುಕೊಂಡಿದ್ದಾರೆ. ಭುವನ್ ಮತ್ತು ಪ್ರಜ್ವಲ್ 50 ಮೀಟರ್ ಬ್ಯಾಕ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ ಪಡೆದರೆ, 25 ಮೀಟರ್‌ನಲ್ಲಿ ಲಿಖಿತಾ ಫ್ರೀ ಸ್ಟೈಲ್ ಬೆಳ್ಳಿಪದಕ ಮತ್ತು 50 ಮೀಟರ್ ಬ್ಯಾಕ್ ಸ್ಟ್ರ್ಟೋಕ್‌ನಲ್ಲಿ ಬಂಗಾರದ ಪದಕ ಪಡೆದುಕೊಂಡರು.