ಕರ್ನಾಟಕ

karnataka

ETV Bharat / state

ಬೈಲೂರು ಗ್ರಾಪಂ ಸದಸ್ಯ ಸ್ಥಾನಗಳ ಹರಾಜು ಪ್ರಕರಣ: 13 ಮಂದಿ ವಿರುದ್ಧ ಎಫ್​ಐಆರ್​ - FIR against 13 of Bailuru

ಬೈಲೂರಿನಲ್ಲಿ ಗ್ರಾಪಂ ಸದಸ್ಯ ಸ್ಥಾನಗಳ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ 13 ಮಂದಿಯ ವಿರುದ್ಧ ಎಫ್​ಐಆರ್​ ದಾಖಲಿಸಿರುವುದಾಗಿ ಬಳ್ಳಾರಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Bellary Bailuru Gram Panchayath Member Bidding Case update
ಬಳ್ಳಾರಿಯ ಬೈಲೂರಿನಲ್ಲಿ ಗ್ರಾ.ಪಂ ಸದಸ್ಯರ ಹರಾಜು ಪ್ರಕರಣ

By

Published : Dec 9, 2020, 6:20 PM IST

ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ಸಿಂದಿಗೇರಿ ಗ್ರಾಮ ಪಂಚಾಯತ್​ ವ್ಯಾಪ್ತಿಯ ಬೈಲೂರಿನಲ್ಲಿ ಗ್ರಾಮ ಪಂಚಾಯತ್​ ಸದಸ್ಯ ಸ್ಥಾನಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ 13 ಮಂದಿ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆಯು 13 ಮಂದಿಯನ್ನು ವಿಚಾರಣೆಗೆ ಒಳಪಡಿಸಿದೆ.‌ ಆರೋಪ ಸಾಬೀತಾಗಿ ಅವರು‌ ಶಿಕ್ಷೆಗೆ ಒಳಗಾದರೆ, ಈ ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇರುವುದಿಲ್ಲ ಎಂದು ಹೇಳಿದರು.

ಕೇವಲ ಎಫ್​ಐಆರ್ ದಾಖಲಾಗಿದ್ದರೆ ಮಾತ್ರ ಗ್ರಾಮ‌ ಪಂಚಾಯತ್​ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇರಲಿದೆ. ಒಂದು ವೇಳೆ ಆರೋಪಿಗಳು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಬಳಿಕ ಆರೋಪ ಸಾಬೀತಾದರೆ ಅವರ ಸದಸ್ಯತ್ವ ಅನೂರ್ಜಿತವಾಗಲಿದೆ‌ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ರಾತ್ರೋರಾತ್ರಿ ಬಿಕರಿಯಾದ ಗ್ರಾಮ ಪಂಚಾಯತ್​ ಸದಸ್ಯತ್ವ: ಪ್ರಜಾಪ್ರಭುತ್ವಕ್ಕೆ ಕಳಂಕ!

ಕೆಲವೊಂದು ಗ್ರಾಮ ಪಂಚಾಯತ್​ಗಳಲ್ಲಿ ಸಣ್ಣಪುಟ್ಟ ಕಾರಣವೊಡ್ಡಿ ಚುನಾವಣೆ ಬಹಿಷ್ಕರಿಸುವುದಾಗಿ ಹೇಳುತ್ತಿದ್ದಾರೆ. ಅಂತಹವರ‌‌ ಮನವೊಲಿಕೆಗೆ ಈಗಾಗಲೇ ಆಯಾ ತಾಲೂಕುಗಳ ತಹಶೀಲ್ದಾರ್​ಗಳಿಗೆ ಸೂಚನೆ ನೀಡಲಾಗಿದೆ.‌ ಚುನಾವಣೆ ಬಹಿಷ್ಕರಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ.‌ ಪ್ರತಿಯೊಬ್ಬರು ಕೂಡ ಮತಗಟ್ಟೆಗೆ ಹೋಗಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ಸಲಹೆ ನೀಡಿದರು.

ಮದಿರೆ ಗ್ರಾಮದಲ್ಲಿ ಸ್ಮಶಾನಕ್ಕೆ ಹಳ್ಳ ದಾಟಿ ಹೋಗುವ ದೃಶ್ಯಾವಳಿಗಳನ್ನು ನಾನು‌ ಗಮನಿಸಿದ್ದೇನೆ. ಆ ಕುರಿತು ಈಗಾಗಲೇ ಸಂಬಂಧಪಟ್ಟವರೊಂದಿಗೆ ಚರ್ಚಿಸಿರುವೆ. ಆ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆ ಸರ್ಕಾರಿ ಭೂಮಿಯ ಕೊರತೆಯಿದೆ. ಖಾಸಗಿ ವ್ಯಕ್ತಿ ಅಥವಾ ಭೂ ಮಾಲೀಕರು ಯಾರಾದರು ಭೂಮಿ‌ ಕೊಡಲು ಮುಂದಾದರೆ, ಖರೀದಿಸಿ ಸ್ಮಶಾನಕ್ಕೆ ಭೂಮಿ ಕಲ್ಪಿಸಿಕೊಡುವುದಾಗಿ ತಿಳಿಸಿದರು. ಭೂಮಿ ಖರೀದಿಗೆ ಯಾವುದೇ ಅನುದಾನದ ಕೊರತೆ ಇಲ್ಲ ಎಂದರು.

ABOUT THE AUTHOR

...view details