ಕರ್ನಾಟಕ

karnataka

ರಾಜ್ಯದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಸೂಕ್ತ ಬೆಡ್​​ ವ್ಯವಸ್ಥೆ ಇದೆಯೇ?

By

Published : May 14, 2021, 6:52 AM IST

ಕೋವಿಡ್​​ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲಾಡಳಿತಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸನ್ನದ್ಧವಾಗಿದೆ. ಆದ್ರೂ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು ಆಸ್ಪತ್ರೆಗಗಳಲ್ಲಿ ಬೆಡ್​, ಆಕ್ಸಿಜನ್​, ವೆಂಟಿಲೇಟರ್​ ಕೊರತೆ ಉದ್ಭವಿಸಿದೆ. ಈ ಕುರಿತಾಗಿ ವರದಿ ಇಲ್ಲಿದೆ..

beds availability for covid patients in state
ರಾಜ್ಯದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಸೂಕ್ತ ಬೆಡ್​​ ವ್ಯವಸ್ಥೆ ಇದೆಯೇ?

ಬಳ್ಳಾರಿ/ಬೆಳಗಾವಿ:ಕೊರೊನಾ ಸೋಂಕಿತರಿಗೆ ಸಕಾಲದಲ್ಲಿ ಸೂಕ್ತವಾದ ಚಿಕಿತ್ಸೆ ಸಿಕ್ಕರೆ ಮಾತ್ರ ಸಾವು ಗೆದ್ದು ಬರಲು ಸಾಧ್ಯ. ಆದ್ರೀಗ ರಾಜ್ಯದಲ್ಲಿ ಕೋವಿಡ್‌ ಸೋಂಕಿತರ ಪ್ರಮಾಣ ಒಂದೇ ಸಮನೆ ಹೆಚ್ಚುತ್ತಿದ್ದು ಆಸ್ಪತ್ರೆಗಳಲ್ಲಿ ಬೆಡ್​, ಆಕ್ಸಿಜನ್​, ವೆಂಟಿಲೇಟರ್​ ಕೊರತೆ ಕ್ಷಣಕ್ಷಣಕ್ಕೂ ಆತಂಕ ಉಂಟುಮಾಡುತ್ತಿದೆ. ಸೋಂಕು ಪ್ರಕರಣಗಳು ಹೆಚ್ಚೆಚ್ಚು ಪತ್ತೆಯಾಗುತ್ತಿರೋದೇ ಇದಕ್ಕೆ ಮೂಲ ಕಾರಣ. ಆದ್ರೆ ರಾಜ್ಯದ ಕೆಲವು ಜಿಲ್ಲೆಗಳು ಕೋವಿಡ್​ ವಿರುದ್ಧದ ಸಮರ ಎದುರಿಸಲು ಸನ್ನದ್ಧವಾಗಿವೆ ಅನ್ನೋದು ಸ್ವಲ್ಪ ಸಮಾಧಾನಕರ ಸಂಗತಿ.

ರಾಜ್ಯದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಸೂಕ್ತ ಬೆಡ್​​ ವ್ಯವಸ್ಥೆ ಇದೆಯೇ?

ಬಳ್ಳಾರಿಯಲ್ಲಿ ಸೋಂಕಿತರ ಚಿಕಿತ್ಸೆಗೆ 2,000ಕ್ಕೂ ಹೆಚ್ಚು ಬೆಡ್​ಗಳು ಲಭ್ಯವಿದೆ. ಆದ್ರೆ ಇಲ್ಲಿ ವೆಂಟಿಲೇಟರ್​​ ಕೊರತೆ ನಿವಾರಣೆಯಾಗಬೇಕಿದೆ. ಸೋಂಕಿತರಿಗೆ ಸಮಸ್ಯೆಯಾಗದಂತೆ ಸಮರ್ಪಕ ಬೆಡ್​ ವ್ಯವಸ್ಥೆ ಮಾಡಲಾಗಿದೆ ಅಂತಾರೆ ಇಲ್ಲಿನ ಡಿಹೆಚ್​​​ಒ ಜನಾರ್ಧನ್​.

ಬೆಳಗಾವಿಯ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿ ಜಿಲ್ಲೆಯಲ್ಲಿ 1,995 ಆಕ್ಸಿಜನ್ ಬೆಡ್‍ ವ್ಯವಸ್ಥೆ ಇದೆ. ಉಳಿದಂತೆ ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲೂ ಸೂಕ್ತ ಪ್ರಮಾಣದಲ್ಲಿ ಸಾಮಾನ್ಯ ಬೆಡ್​​ ವ್ಯವಸ್ಥೆ ಇದೆ. ಆದ್ರೆ ಸೋಂಕಿತರು ಹೆಚ್ಚಾಗುತ್ತಿದ್ದು ಆಕ್ಸಿಜನ್​ ಬೆಡ್​​ಗಳೆಲ್ಲವೂ ಭರ್ತಿಯಾಗಿವೆ. ಹಾಗಾಗಿ ಇನ್ನೂ 200 ಆಕ್ಸಿಜನ್ ಬೆಡ್ ಹೆಚ್ಚಳಕ್ಕೆ ಕ್ರಮ ವಹಿಸಲಾಗಿದೆ.

ಪ್ರತಿದಿನ ಕೋವಿಡ್​ ಪ್ರಕರಣಗಳು ಹೆಚ್ಚುತ್ತಿದ್ದು ಆಕ್ಸಿಜನ್​ ಬೆಡ್​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಆಕ್ಸಿಜನ್​ ಬೆಡ್​ ಕೊರತೆಯಿಂದ ಮತ್ತಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಹಾಗಾಗಿ ಸೋಂಕು ಹರಡದಂತೆ ಕ್ರಮ ವಹಿಸೋದೇ ಸದ್ಯದ ಸೂಕ್ತ ಮಾರ್ಗೋಪಾಯ.

ABOUT THE AUTHOR

...view details