ಬಳ್ಳಾರಿ/ವಿಜಯನಗರ :ಸಂಡೂರಿನ ತೋರಣಗಲ್ ಬಳಿಯ ಜಿಂದಾಲ್ ಕಾರ್ಖಾನೆಯಲ್ಲಿ ಹಾಡಹಗಲೇ ಕರಡಿ ಪ್ರತ್ಯಕ್ಷವಾಗಿ ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ. ಜಿಂದಾಲ್ನ ಆರ್‌ಎಂಎಸ್‌ಹೆಚ್ ಬಳಿಯಲ್ಲಿ ಕರಡಿ ಕಂಡು ಕಾರ್ಮಿಕರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಇನ್ನು ಕರಡಿ ಓಡಸಲು ಸೆಕ್ಯುರಿಟಿ ಗಾರ್ಡ್‌ಗಳು ಹರಸಾಹಸ ಪಟ್ಟಿದ್ದಾರೆ.
ವಿಜಯನಗರದಲ್ಲೂ ಸಹ ಕರಡಿ ಹಾವಳಿ ಮಿತಿಮೀರಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಕರಡಿಯೊಂದು ಪಾಳು ಬಾವಿಯೊಳಗೆ ಬಿದ್ದಿದೆ. ಘಟನೆ ಕೂಡ್ಲಿಗಿ ತಾಲೂಕಿನ ಮಡ್ಲಾಕನಹಳ್ಳಿ ಗ್ರಾಮದಲ್ಲಿ ಬಳಿ ನಡೆದಿದೆ. ಪಾಳು ಬಾವಿಯೊಳಗೆ ಬಿದ್ದಿರುವ ಕರಡಿ ರಕ್ಷಣೆಗೆ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿದ್ದಾರೆ.