ಹೊಸಪೇಟೆ(ವಿಜಯನಗರ): ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಮಲಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕರಡಿ ಸ್ಥಳದಲ್ಲೇ ಮೃತಪಟ್ಟಿದೆ.
ತಾಲೂಕಿನ ಗುಡೇಕೋಟೆ ಗ್ರಾಮದ ಬಳಿ ಕರಡಿ ಧಾಮವಿದೆ. ಅಲ್ಲದೆ, ಧಾಮದ ಅರಣ್ಯಕ್ಕೆ ಅಂಟಿಕೊಂಡಂತೆ ಅಮಲಾಪುರ ಬಳಿ ಕಾದಿಟ್ಟ ಅರಣ್ಯ ಪ್ರದೇಶವೂ ಇದೆ. ಆಹಾರ ಅರಸಿ ಬಂದಿರುವ ಕರಡಿಯು ರಾಷ್ಟ್ರೀಯ ಹೆದ್ದಾರಿ ದಾಟುತ್ತಿರುವ ಸಂದರ್ಭದಲ್ಲಿ ಲಾರಿಯೊಂದು ಹರಿದಿದ್ದು ಕಾಡುಪ್ರಾಣಿ ಸ್ಥಳದಲ್ಲೇ ಮೃತಪಟ್ಟಿದೆ.