ಬಳ್ಳಾರಿ : ಕೂಡ್ಲಿಗಿ ತಾಲೂಕಿನ ಗುಂಡುಮುಣಗು ಗ್ರಾಮದ ಹೊರವಲಯದ ಹೊಲದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿದೆ.
ಕೂಡ್ಲಿಗಿ: ಗುಂಡುಮುಣಗು ಗ್ರಾಮದ ಜಮೀನಿನಲ್ಲಿ ಕರಡಿ ಪ್ರತ್ಯಕ್ಷ - ಜಮೀನಿಗೆ ಲಗ್ಗೆಯಿಟ್ಟ ಕರಡಿ
ಕೂಡ್ಲಿಗಿ ತಾಲೂಕಿನ ಗುಂಡುಮುಣಗು ಗ್ರಾಮದ ಜಮೀನಿನಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿ ಕೆಲಕಾಲ ರೈತರಲ್ಲಿ ಆತಂಕ ಸೃಷ್ಟಿಸಿತ್ತು.
ಜಮೀನಿಗೆ ಲಗ್ಗೆಯಿಟ್ಟ ಕರಡಿ
ಹಗಲು ಹೊತ್ತಲ್ಲೇ ಜಮೀನಿಗೆ ಕರಡಿ ಲಗ್ಗೆಯಿಟ್ಟಿದ್ದನ್ನು ನೋಡಿ ರೈತರು ಭಯಭೀತರಾಗಿದ್ದು, ಕರಡಿಯನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಾಗ ವನ್ಯ ಪ್ರಾಣಿಗಳು ರೈತರ ಜಮೀನಿಗೆ ದಾಳಿಯಿಡುತ್ತಿದ್ದು, ರೈತರು ಹೊಲದಲ್ಲಿ ಕೆಲಸ ಮಾಡಲು ಹೆದರುವಂತಾಗಿದೆ.