ಕರ್ನಾಟಕ

karnataka

ETV Bharat / state

ಗಣಿ ಜಿಲ್ಲೆಯಲ್ಲಿ ಯಮನಾಗಿ ಬಂದ ಕರಡಿ, ತೆಗಿಯಿತು ರೈತನ ಪ್ರಾಣ - ಬಳ್ಳಾರಿ‌ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮ

ಬಳ್ಳಾರಿ‌ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ರೈತ  ಇಬ್ರಾಹಿಂ ( 45 ) ಸಾವನ್ನಪ್ಪಿದ್ದಾರೆ. ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಅದನ್ನು ನೋಡಲು ಜಮೀನಿಗೆ ಹೋದಾಗ ಕರಡಿ ದಾಳಿ ಮಾಡಿದ್ದು, ರೈತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಯಮನಾಗಿ ಬಂದ ಕರಡಿ, ತೆಗಿಯಿತು ರೈತನ ಪ್ರಾಣ

By

Published : Aug 22, 2019, 10:03 PM IST

ಬಳ್ಳಾರಿ‌ : ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ರೈತನ ಮೇಲೆ ಕರಡಿ ದಾಳಿ ಮಾಡಿ ರೈತ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕರಡಿ ದಾಳಿಗೆ ಬಲಿಯಾಗಿರುವ ರೈತನನ್ನು ಇಬ್ರಾಹಿಂ ( 45 ) ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಅದನ್ನು ನೋಡಲು ಜಮೀನಿಗೆ ಹೋದಾಗ ಕರಡಿ ದಾಳಿ ಮಾಡಿದ್ದು, ರೈತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಯಮನಾಗಿ ಬಂದ ಕರಡಿ, ತೆಗಿಯಿತು ರೈತನ ಪ್ರಾಣ

ಜಮೀನಿನ ಪಕ್ಕದಲ್ಲಿಯೇ ಅಡವಿ ಇದ್ದ ಕಾರಣ ಸಾಕಷ್ಟು ಕರಡಿಗಳು ಈ ಭಾಗಕ್ಕೆ ಬರುತ್ತವೆ ಎಂದು ಸ್ಥಳೀಯರು ಹೇಳಿದ್ದಾರೆ. ಇನ್ನು ಸ್ಥಳಕ್ಕೆ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದಾರೆ. ಕೂಡ್ಲಿಗಿ ತಾಲೂಕಿನ ಖಾನಾಹೊಸಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details