ವಿಜಯನಗರ: ಹೊಸಪೇಟೆಯ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗಿದೆ. ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಗೆದ್ದರೆ, ಒಂದು ಮತದಿಂದ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಸೋಲು ಕಂಡಿದ್ದಾರೆ. ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ 57 ಮತಗಳಿಂದ ದಾಖಲೆಯ ಗೆಲುವು ಕಂಡರೆ, ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಪುತ್ರ ಅಣ್ಣಪ್ಪ ಗೆಲುವು ಸಾಧಿಸಿದರು. ಮಾಜಿ ಸಚಿವ ಆನಂದ್ ಸಿಂಗ್ ಅಳಿಯ ಸಂದೀಪ್ ಸಿಂಗ್ ಕೂಡ ಗೆಲುವಿನ ನಗೆ ಬೀರಿದರು.
ಹೊಸಪೇಟೆಯ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನದಲ್ಲಿಯೂ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ಸೋಲು ಅನುಭವಿಸಿದ್ದಾರೆ. ಐಗೋಳ್ ಚಿದಾನಂದ ಪಿ.ಟಿ.ಪರಮೇಶ್ವರ್ ನಾಯ್ಕ್ ಜತೆಗಿದ್ದವರು. ಈ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲೂ ಕೂಡಾ ಐಗೋಳ್ ಚಿದಾನಂದ ಪಿಟಿಪಿಗೆ ಎದುರಾಗಿದ್ದರು.
ಚೀಟಿಯಿಂದ ಗೆಲುವು ನಿರ್ಧಾರ:ಎಂ.ಪಿ.ದೇವೇಂದ್ರಪ್ಪ ಅವರ ಪುತ್ರ ಅಣ್ಣಪ್ಪ ಕೂಡ ಗೆಲುವು ಕಂಡಿದ್ದಾರೆ. ಆದರೆ ಚೀಟಿ ಎತ್ತುವ ಮೂಲಕ ಗೆಲುವು ನಿರ್ಧರಿಸಲಾಯಿತು.