ಬಳ್ಳಾರಿ: ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘಗಳ ಕರೆಯ ಮೇರೆಗೆ ಆಗಮಿಸಿದ 300 ಕ್ಕೂ ಹೆಚ್ಚು ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ತಮ್ಮ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಳ್ಳಾರಿ ಮುಂದೆ ಧರಣಿ ನಡೆಸಿದರು.
ಬಳ್ಳಾರಿ: ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದೆ ಬೃಹತ್ ಧರಣಿ - ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘಗಳು
ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘ, ಸಮನ್ವಯ ಮತ್ತು ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು.
ಹಲವು ಬೇಡಿಕೆಗಳನ್ನು ಈಡೇರಿಸಲು ಕಳೆದೊಂದು ವರ್ಷದಿಂದ ನಮ್ಮ ಪದಾಧಿಕಾರಿಗಳು ಬ್ಯಾಂಕಿನ ಅಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ ಈವರೆಗೂ ನಮ್ಮ ಯಾವ ಬೇಡಿಕೆಯೂ ಈಡೇರಿಲ್ಲ. ಬ್ಯಾಂಕಿನ ಆಡಳಿತ ಮಂಡಳಿ ತನ್ನ ಹಠಮಾರಿ ಧೋರಣೆಯನ್ನು ಹೀಗೆಯೇ ಮುಂದುವರೆಸಿದಲ್ಲಿ ಮುಂಬರುವ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ನಮಗೆ ನ್ಯಾಯಯುತವಾಗಿ ಜಾರಿಯಾಗಬೇಕಾಗಿದ್ದ ಭವಿಷ್ಯ ನಿಧಿಯ ಹಣ(ಪಿಎಫ್) ಹಣ ಜಾರಿ ಮಾಡದಿರುವುದು, ಮನೆ ಸಾಲ ಮರುಪಾವತಿಯನ್ನು 70 ವರ್ಷಗಳವರೆಗೆ ತನಕ ವಿಸ್ತರಿಸದಿರುವುದು, ರಾಜೀನಾಮೆ ಕೊಟ್ಟ ನೌಕರರರಿಗೆ ನಿವೃತ್ತಿ ವೇತನ ಜಾರಿ ಮಾಡದಿರುವ ಬ್ಯಾಂಕಿನ ಕ್ರಮಗಳನ್ನು ಪ್ರತಿಭಟನೆಯಲ್ಲಿ ಖಂಡಿಸಲಾಯ್ತು.