ಹೊಸಪೇಟೆ:ಕಲಬುರ್ಗಿ ಜಿಲ್ಲೆಯ ಮಾದಿನಾಳ್ ತಾಂಡದ ಸಂತ ಸೇವಾಲಾಲ್ ಪ್ರತಿಮೆಯನ್ನು ಧ್ವಂಸಗೊಳಿಸಿದ ಆರೋಪಿಗಳನ್ನು ಕೂಡಲೆ ಬಂಧಿಸಬೇಕು ಎಂದು ಬಂಜಾರ ಸಮಾಜವು ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.
ಸಂತ ಸೇವಾಲಾಲ್ ಪ್ರತಿಮೆ ಧ್ವಂಸಕ್ಕೆ ಖಂಡನೆ: ರಸ್ತೆ ತಡೆದು ಪ್ರತಿಭಟಸಿದ ಬಂಜಾರ ಸಮಾಜ - ಸಂತ ಸೇವಾಲಾಲ್ ಪ್ರತಿಮೆ ದ್ವಂಸಕ್ಕೆ ರಸ್ತೆ ತಡೆದು ಪ್ರತಿಭಟಸಿದ ಬಂಜಾರ ಸಮಾಜ
ಕಲಬುರ್ಗಿ ಜಿಲ್ಲೆಯ ಮಾದಿನಾಳ್ ತಾಂಡದ ಸಂತ ಸೇವಾಲಾಲ್ ಪ್ರತಿಮೆಯನ್ನು ದ್ವಂಸಗೊಳಿಸಿದ ಆರೋಪಿಗಳನ್ನು ಕೂಡಲೆ ಬಂಧಿಸಬೇಕು ಎಂದು ಬಂಜಾರ ಸಮಾಜವು ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿರುವ ಘಟನೆ ಹೊಸಪೇಟೆ ನಗರದಲ್ಲಿ ನಡೆದಿದೆ.
ಸಂತ ಸೇವಾಲಾಲ್ ಪ್ರತಿಮೆ ದ್ವಂಸಕ್ಕೆ ಖಂಡನೆ: ರಸ್ತೆ ತಡೆದು ಪ್ರತಿಭಟಸಿದ ಬಂಜಾರ ಸಮಾಜ..
ನಗರದಲ್ಲಿ ಇಂದು ಬಂಜಾರ ಸಮಾಜಕ್ಕೆ ದಿನದಿಂದ ದಿನಕ್ಕೆಅನ್ಯಾಯವನ್ನು ಮಾಡುತ್ತಿದ್ದಾರೆ ಎಂದು ನಗರದ ಗಾಂಧಿ ವೃತ್ತದಿಂದ ರೋಟರಿ ವೃತ್ತದ ವರೆಗೆ ರಸ್ತೆಯನ್ನು ತಡೆದು ಪ್ರತಿಭಟನೆಯನ್ನು ಮಾಡಿದ ಸಮುದಾಯ, ಸಂತ ಸೇವಾಲಾಲ್ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಅವರು ಇಡೀ ಬಂಜಾರ ಸಮುದಾಯಕ್ಕೆ ಅಪಮಾನವನ್ನು ಮಾಡಿದ್ದಾರೆ ಎಂದು ಆಕ್ರೋಶಿತರಾದರು.
ಸೇವಾಲಾಲ್ ಅವರು ಬಂಜಾರ ಸಮುದಾಯದ ಆರಾಧ್ಯ ದೇವ, ಸಮಾಜಕ್ಕೆ ಮಾದರಿಯಾಗಿರುವಂತಹ ಪಶುಪಾಲನೆ, ಹೈನುಗಾರಿಕೆ ,ಕೃಷಿ, ವ್ಯಾಪಾರ, ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ವ್ಯಕಿಯ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಖಂಡನೀಯ ಎಂದು ಪ್ರತಿಭಟಿಸಿದ್ದಾರೆ.