ಬಳ್ಳಾರಿ:ಬೆಂಗಳೂರಿನ ಪುಲಿಕೇಶಿ ವಿಧಾನಸಭಾ ಕ್ಷೇತ್ರದ ಶಾಸಕರ ಮನೆ ಮೇಲೆ ದಾಳಿ ಪ್ರಕರಣದಲ್ಲಿ ಭಾಗಿಯಾಗಿರುವ ಅಂದಾಜು 80 ಮಂದಿ ಆರೋಪಿಗಳನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕರೆ ತರಲಾಗಿದೆ.
ಕೆಜಿ - ಡಿಜೆ ಹಳ್ಳಿ ಗಲಭೆ ಪ್ರಕರಣ: ಬಳ್ಳಾರಿ ಜೈಲಿಗೆ ಬಂದಿಳಿದ ಆರೋಪಿಗಳು! - ಬಳ್ಳಾರಿ ಜೈಲಿಗೆ ಬಂದಿಳಿದ ಆರೋಪಿಗಳು
ಕೆ.ಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಗಳನ್ನು ಇಂದು ಬೆಳ್ಳಂಬೆಳಗ್ಗೆ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕರೆತರಲಾಗಿದೆ.
ಬೆಂಗಳೂರು ಗಲಭೆ ಪ್ರಕರಣದ ಆರೋಪಿಗಳು ಬಳ್ಳಾರಿಗೆ ಶಿಫ್ಟ್
ಬೆಳ್ಳಂಬೆಳಗ್ಗೆ 3 ಕೆಎಸ್ಆರ್ಟಿಸಿಬಸ್ ಹಾಗೂ ಪೊಲೀಸ್ ಭದ್ರತಾ ಪಡೆಯೊಂದಿಗೆ ಅವರನ್ನ ಕರೆತರಲಾಯಿತು. ಕೆ.ಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯ ವ್ಯಾಪ್ತಿಯಲ್ಲಿ ನಡೆದ ಗಲಭೆ ಸಂಬಂಧ ಈ ಆರೋಪಿಗಳನ್ನು ಬಂಧಿಸಲಾಗಿತ್ತು. ಎರಡು ರಿಸರ್ವ್ ವಾಹನಗಳ ಮೂಲಕ ಈ ಆರೋಪಿಗಳಿಗೆ ಬಿಗಿಯಾದ ಬಂದೋಬಸ್ತ್ ನೀಡಲಾಗಿತ್ತು.
ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕರೆತರುವ ಮುನ್ನವೇ ಎಲ್ಲ ಆರೋಪಿಗಳಿಗೂ ಕೋವಿಡ್ ಟೆಸ್ಟ್ ನಡೆಸಲಾಗಿದೆ. ಕೊರೊನಾ ವರದಿ ಬಂದ ನಂತರವಷ್ಟೆ ಆರೋಪಿಗಳನ್ನು ಬಳ್ಳಾರಿಗೆ ಕರೆತರಲಾಗಿದೆ. ಸದ್ಯ ಕಾರಾಗೃಹದಲ್ಲಿ ಅಧಿಕಾರಿಗಳು, ಆರೋಪಿಗಳ ದಾಖಲೆ ಪರಿಶೀಲಿಸುತ್ತಿದ್ದಾರೆ.