ಬಳ್ಳಾರಿ :ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಅರಣ್ಯದಲ್ಲಿ ವಿಷಕಾರಿ ಅಪರೂಪದ ಬ್ಯಾಂಬು ಪಿಟ್ ವೈಪರ್ ಹಾವು ಪತ್ತೆಯಾಗಿದೆ.
ಗುಡೇಕೋಟೆ ಅರಣ್ಯದಲ್ಲಿ ಬ್ಯಾಂಬು ಪಿಟ್ ವೈಪರ್ ವಿಷಕಾರಿ ಹಾವು ಪತ್ತೆ! - Bambu Pit Viper Poisonous Snake
ಕರಡಿಧಾಮವೆಂದು ಘೋಷಿಸಿರುವ ಅರಣ್ಯ ಪ್ರದೇಶದಲ್ಲಿ ಹಲವಾರು ಪ್ರಬೇಧದ ಹಾವುಗಳು ವಾಸಿಸುತ್ತಿವೆ. ಹಾವು, ಪ್ರಾಣಿ, ಪಕ್ಷಿಗಳು ಹಾಗೂ ಚಿಟ್ಟೆಗಳ ಬಗ್ಗೆಯೂ ಕೂಡ ಇಲ್ಲಿಯ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆಹಚ್ಚುವ ಕಾರ್ಯ ಮಾಡುತ್ತಿರುವುದು ಶ್ಲಾಘನಾರ್ಹ..
ಈ ಪ್ರಬೇಧದ ಹಾವುಗಳು ರಾಜ್ಯದ ಪಶ್ಚಿಮ ಘಟ್ಟ, ಸಂಡೂರು ಅರಣ್ಯ ಪ್ರದೇಶ ಹಾಗೂ ಆನೆಗೊಂದಿ ಪ್ರದೇಶ ಬಿಟ್ಟರೆ ಹೆಚ್ಚಾಗಿ ಎಲ್ಲಿಯೂ ಕಾಣಸಿಗುವುದಿಲ್ಲ. ಆದರೆ, ಇಂತಹ ಅಪರೂಪದ ವಿಷಕಾರಿ ಹಾವು ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಅರಣ್ಯದಲ್ಲಿ ಪತ್ತೆಯಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅರಣ್ಯದಲ್ಲಿ ಗಸ್ತು ತಿರುಗುವಾಗ ಈ ಹಾವು ಕಣ್ಣಿಗೆ ಬಿದ್ದಿದೆ.
ಗುಡೇಕೋಟೆ ಕರಡಿಧಾಮವೆಂದು ಘೋಷಿಸಿರುವ ಅರಣ್ಯ ಪ್ರದೇಶದಲ್ಲಿ ಹಲವಾರು ಪ್ರಬೇಧದ ಹಾವುಗಳು ವಾಸಿಸುತ್ತಿವೆ. ಹಾವು, ಪ್ರಾಣಿ, ಪಕ್ಷಿಗಳು ಹಾಗೂ ಚಿಟ್ಟೆಗಳ ಬಗ್ಗೆಯೂ ಕೂಡ ಇಲ್ಲಿಯ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆಹಚ್ಚುವ ಕಾರ್ಯ ಮಾಡುತ್ತಿರುವುದು ಶ್ಲಾಘನಾರ್ಹ. ಈ ಅಪರೂಪದ ಹಾಗೂ ವಿನಾಶದ ಅಂಚಿನಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ಗುಡೇಕೋಟೆ ಅರಣ್ಯ ಆಸರೆಯಾಗಿರುವುದಂತೂ ನಿಜ.