ಕರ್ನಾಟಕ

karnataka

ETV Bharat / state

ನೇಣಿಗೆ ಶರಣಾದ ವ್ಯಕ್ತಿ: ಕೊಲೆ ಶಂಕೆ - ನೇಣುಬಿಗಿದು ಆತ್ಮಹತ್ಯೆ

ಜಯಪ್ರಕಾಶ ಶೆಟ್ಟಿ ಎಂಬುವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈತ ರಾಘವೇಂದ್ರ ವೃತ್ತದ ಬಳಿ ಇರುವ ಕೂಲ್​ ಕಾರ್ನರ್​ ಅಂಗಡಿಯ ಮಾಲೀಕ. ರೂಮ್​ವೊಂದರಲ್ಲಿ ಗುರುವಾರ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನೇಣಿಗೆ ಶರಣು
ನೇಣಿಗೆ ಶರಣು

By

Published : Jun 5, 2020, 5:33 PM IST

ಬಳ್ಳಾರಿ:ನಗರದ ಕೂಲ್​ ಕಾರ್ನರ್​ ಅಂಗಡಿಯ ಮಾಲೀಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ರಾಘವೇಂದ್ರ ವೃತ್ತದ ಬಳಿ ನಡೆದಿದೆ.

ಜಯಪ್ರಕಾಶ ಶೆಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ರಾಘವೇಂದ್ರ ವೃತ್ತದ ಬಳಿಯಿರುವ ಕೂಲ್​ ಕಾರ್ನರ್​ ಅಂಗಡಿಯ ಮಾಲೀಕ. ರೂಮ್​ವೊಂದರಲ್ಲಿ ಗುರುವಾರ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಜಯಪ್ರಕಾಶ ಶೆಟ್ಟಿ ಸಾವು ಅನುಮಾನಾಸ್ಪದವಾಗಿದ್ದು, ಹತ್ಯೆ ಮಾಡಿ ನೇಣು ಹಾಕಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details