ಕರ್ನಾಟಕ

karnataka

ETV Bharat / state

ಸದಾಶಿವ ಆಯೋಗದ ವರದಿ ಜಾರಿ ಮಾಡಿ.. ಗೋಲಾಪುರ ಮುನಿರಾಜ - ಜಾತಿಗೆ ಅನುಗುಣವಾಗಿ ಮೀಸಲಾತಿಯನ್ನು ನೀಡಬೇಕು

ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡದೆ ಮಾದಿಗರಿಗೆ ಸರ್ಕಾರದಿಂದ ಮತ್ತು‌ ಸಮಾಜದಿಂದ ಅನ್ಯಾಯವಾಗುತ್ತಿದೆ ಎಂದು ಗೊಲ್ಲಾಪುರ ಮುನಿರಾಜ ಆಕ್ರೋಶ ವ್ಯಕ್ತಪಡಿಸಿದರು.

ಗೋಲಾಪುರ ಮುನಿರಾಜ
ಗೋಲಾಪುರ ಮುನಿರಾಜ

By

Published : Dec 15, 2019, 4:58 PM IST

ಹೊಸಪೇಟೆ :ಸದಾಶಿವ ವರದಿ ಜಾರಿ ಮಾಡಲಿ ಎಂದು ಸುಮಾರು ವರ್ಷಗಳಿಂದ ಹೋರಾಟವನ್ನು ಮಾಡುತ್ತಾ ಬಂದಿದ್ದೇವೆ. ಆದರೆ, ಸರ್ಕಾರ ಮಾತ್ರ ಈ ಬಗ್ಗೆ ಕಿಂಚಿತ್ತು ಆಸಕ್ತಿಯನ್ನು ತೋರಿಸುತ್ತಿಲ್ಲ ಎಂದು ಗೋಲ್ಲಾಪುರ ಮುನಿರಾಜ ಆಕ್ರೋಶ ವ್ಯಕ್ತಪಡಿಸಿದರು.

ಮಾದಿಗರ ಜಿಲ್ಲಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸದಾಶಿವ ವರದಿಯನ್ನು ನಿವೃತ್ತ ನ್ಯಾ. ಸದಾಶಿವ ಅವರು ಸಮೀಕ್ಷೆಯನ್ನು ಮಾಡಿದ್ದಾರೆ. ಮಾದಿಗರಿಗೆ ಹಾಗೂ ಸಂಬಂಧಿಸಿದ ಜಾತಿಗಳಿಗೆ ಮೀಸಲಾತಿ ಅನಿವಾರ್ಯ. ಪರಿಶಿಷ್ಟ ಜಾತಿಯಲ್ಲಿ 103 ಜಾತಿಗಳು ಬರುತ್ತವೆ. ಅದರಲ್ಲಿ ಸ್ಪರ್ಶ ಜಾತಿಗಳು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಪಡೆದುಕೊಳ್ಳುತ್ತಿವೆ ಎಂದರು.

ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯ..

ಜಾತಿಗೆ ಅನುಗುಣವಾಗಿ ಮೀಸಲಾತಿಯನ್ನು ನೀಡಬೇಕು ಎಂದು ಕಾನೂನಿನಲ್ಲಿಯೇ ಇದೆ. ರಾಜಕೀಯ ವ್ಯಕ್ತಿಗಳು ನಮ್ಮಿಂದ ಮತಗಳನ್ನು ಮಾತ್ರ ಬಯಸುತ್ತಾರೆ. ಆದರೆ, ಮೀಸಲಾತಿಯನ್ನು ಕೇಳಿದರೆ ಸರ್ಕಾರ ಮೌನ ವಹಿಸುತ್ತದೆ ಎಂದರು.

ABOUT THE AUTHOR

...view details