ಕರ್ನಾಟಕ

karnataka

ETV Bharat / state

ಬಳ್ಳಾರಿ ಜಿಲ್ಲೆ ಶೀಘ್ರದಲ್ಲೇ ಕೊರೊನಾ ಮುಕ್ತ: ಸಚಿವ ಆನಂದ್ ​ಸಿಂಗ್ - ballary latest news

ಡಿಸಿ ಕಚೇರಿಯ ಸಭಾಂಗಣದಲ್ಲಿಂದು ಕೋವಿಡ್ -19ಗೆ ಸಂಬಂಧಿಸಿದ ‌ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಚರ್ಚಿಸಲಾಗಿದೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್​ಸಿಂಗ್​, ಈ ಗಣಿ ಜಿಲ್ಲೆ ಕೊರೊನಾ ವೈರಸ್​ನಿಂದ ಮುಕ್ತಿ ಪಡೆದು ಆದಷ್ಟು ಬೇಗನೆ ಸಿಹಿ ಸುದ್ದಿ ಸಿಗಲಿದೆ ಎಂದು ತಿಳಿಸಿದರು.

Ballary district will be clear from Corona
ಕೊರೊನಾ ಮುಕ್ತರಾಗೋದೆ ಒಂದು ಸಿಹಿಸುದ್ದಿ: ಸಚಿವ ಆನಂದಸಿಂಗ್

By

Published : Apr 25, 2020, 4:04 PM IST

ಬಳ್ಳಾರಿ:ಜಿಲ್ಲೆ ಕೊರೊನಾ ಮುಕ್ತವಾಗಲಿದ್ದು, ಶೀಘ್ರವೇ ಸಿಹಿ ಸುದ್ದಿ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ​ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಜಿಲ್ಲೆ ಶೀಘ್ರವೇ ಕೊರೊನಾ ಮುಕ್ತ- ಸಚಿವ ಆನಂದ್​ ಸಿಂಗ್ ವಿಶ್ವಾಸ

ನಗರದ ಡಿಸಿ ಕಚೇರಿಯ ಸಭಾಂಗಣದಲ್ಲಿಂದು ನಡೆದ ಕೋವಿಡ್ -19ಗೆ ಸಂಬಂಧಿಸಿದ ‌ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಗಣಿ ಜಿಲ್ಲೆ ಕೊರೊನಾ ವೈರಸ್​ನಿಂದ ಮುಕ್ತಿ ಪಡೆಯಲಿದೆ ಎಂದರು. ಕೊರೊನಾ ಜೊತೆಗೆ ರೈತರ ಸಮಸ್ಯೆ, ತೋಟಗಾರಿಕೆಯ ಸಮಸ್ಯೆ ಕುರಿತು ಚರ್ಚಿಸಲಾಗಿದ್ದು, ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಿದ್ದೇವೆ ಎಂದರು.

ಲಾಕ್​ಡೌನ್ ಸಡಿಲಿಕೆ ವಿಚಾರವನ್ನ ನಾನು ಬಹಿರಂಗವಾಗಿ ಹೇಳಲ್ಲ ಎಂದರು. ಈ ವೇಳೆ ಕೊಪ್ಪಳ ಕರಡಿ ಸಂಗಣ್ಣ, ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ, ಬಳ್ಳಾರಿನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಉಪಸ್ಥಿತರಿದ್ದರು.

ABOUT THE AUTHOR

...view details