ಬಳ್ಳಾರಿ: ಟ್ರಾಮಾ ಕೇರ್ ಸೆಂಟರ್ನಲ್ಲಿನ ಕೋವಿಡ್ ಸೋಂಕಿತರಿಗೆ ಜಿಲ್ಲಾಡಳಿತ ಡ್ಯಾನ್ಸ್, ನಾಟಕದ ಮೂಲಕ ಆತ್ಮಸ್ಥೈರ್ಯ ತುಂಬಲು ಮುಂದಾಗಿದೆ.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಟ್ರಾಮಾ ಕೇರ್ ಸೆಂಟರ್‌ನ ಕೋವಿಡ್ ಆಸ್ಪತ್ರೆ ಸಹಯೋಗದಲ್ಲಿ ನಿನ್ನೆ ರೆಡ್ ಕ್ರಾಸ್ ಸಂಸ್ಥೆಯ ತರಬೇತುದಾರರು ಕೋವಿಡ್ ರೋಗಿಗಳಿಗೆ ಮಾನಸಿಕ ಸಮಾಲೋಚನೆ, ಆಕ್ಸಿಜನ್ ಕಾನ್ಸಂಟ್ರೇಟರ್ ಬಳಸುವುದು ಮತ್ತು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸೋದು ಹೇಗೆ ಎಂಬುದರ ಕುರಿತ ಕಿರು ನಾಟಕವನ್ನು ಪ್ರದರ್ಶಿಸಿ ಕೋವಿಡ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬೋ ಕಾರ್ಯ ಮಾಡಿದರು.
ಮಾನಸಿಕ ಸಮಾಲೋಚನೆ ವಿಚಾರದಲ್ಲಿ ಕೋವಿಡ್ ರೋಗಿಗಳ ಆರೋಗ್ಯದ ಸ್ಥಿತಿ, ಅವರ ಮಾನಸಿಕ ಸ್ಥಿತಿಯನ್ನರಿತು ಧೈರ್ಯ ತುಂಬಲು ಮುಂದಾದ ರೆಡ್ ಕ್ರಾಸ್ ಸಂಸ್ಥೆಯ ವಿಷೇಶ ತರಬೇತುದಾರರು, ಕಿರು ನಾಟಕ ಮತ್ತು ರಸಮಂಜರಿ ಕಾರ್ಯಕ್ರಮಗಳೊಂದಿಗೆ ರೋಗಿಗಳ ಮನ ರಂಜಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ಮಾರ್ಗಸೂಚಿ ಮುಂದುವರೆಸುವ ಕುರಿತು ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ
ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್ನಲ್ಲಿ ಹೆಚ್ಚು ಮಂದಿ ಯುವಕರೇ ದಾಖಲಾಗಿದ್ದಾರೆ. ಈ ಕೋವಿಡ್ ರೋಗದ ಬಗ್ಗೆ ಇವರು ಗಾಬರಿಯಾಗುತ್ತಿರೋದನ್ನು ಮನಗಂಡ ಜಿಲ್ಲಾಡಳಿತ ಈ ಮನರಂಜನೆ ಕಾರ್ಯಕ್ರಮ ಆಯೋಜಿಸಿದೆ. ಈ ಸೋಂಕಿನಿಂದ ಗೆದ್ದು ಬರಲು ಮಾನಸಿಕ ಆತ್ಮಸ್ಥೈರ್ಯ ತುಂಬೋದಲ್ಲದೇ ಕೋವಿಡ್ ಸೋಂಕನ್ನು ಹೇಗೆ ನಾವು ಗೆಲ್ಲಬಹುದು ಎಂಬುದರ ಕುರಿತ ಅರಿವನ್ನೂ ಸಹ ಇಲ್ಲಿ ಮೂಡಿಸಲಾಯಿತು.