ಕರ್ನಾಟಕ

karnataka

ETV Bharat / state

ಕರ್ತವ್ಯದಲ್ಲಿ ಪಾರದರ್ಶಕತೆಗೆ ಧಕ್ಕೆ ತಂದರೆ ಶಿಸ್ತು ಕ್ರಮ: ಬಳ್ಳಾರಿ ಡಿಸಿ - ಬಳ್ಳಾರಿ ಲೇಟೆಸ್ಟ್ ನ್ಯೂಸ್

ಮಹಾನಗರ ಪಾಲಿಕೆ ಚುನಾವಣಾ ಕರ್ತವ್ಯಕ್ಕೆ ಯಾರೇ ನಿಯೋಜನೆಗೊಂಡರೂ ಪರವಾಗಿಲ್ಲ. ಅದು ಸ್ಥಳೀಯರೇ ಆಗಲಿ ಅಥವಾ ಹೊರಗಿನವರೇ ಆಗಲಿ. ಈ ಚುನಾವಣಾ ಕರ್ತವ್ಯದಲ್ಲಿ ಕಡ್ಡಾಯವಾಗಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದು ಡಿಸಿ ಹೇಳಿದ್ದಾರೆ.

dc pavana kumara malapati
ಜಿಲ್ಲಾಧಿಕಾರಿ ಪವನ ಕುಮಾರ ಮಾಲಪಾಟಿ

By

Published : Apr 23, 2021, 10:51 AM IST

ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ನೌಕರರು ಪಾರದರ್ಶಕತೆಗೆ ಧಕ್ಕೆ ತಂದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಬಳ್ಳಾರಿ ಜಿಲ್ಲಾಧಿಕಾರಿ ಪವನ ಕುಮಾರ ಮಾಲಪಾಟಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಪವನ ಕುಮಾರ ಮಾಲಪಾಟಿ

'ಬಳ್ಳಾರಿ ಪಾಲಿಕೆ ಚುನಾವಣಾ ಕರ್ತವ್ಯಕ್ಕೆ ಸ್ಥಳೀಯ ನೌಕರರ ನಿಯೋಜನೆ: ಎಲ್ಲಿದೆ ಪಾರದರ್ಶಕತೆ' ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ವಿಸ್ತೃತವಾದ ವರದಿ ಪ್ರಕಟಿಸಿತ್ತು. ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ‌ ಡಿಸಿ ಪವನಕುಮಾರ ಮಾಲಪಾಟಿ, ಮಹಾನಗರ ಪಾಲಿಕೆ ಚುನಾವಣಾ ಕರ್ತವ್ಯಕ್ಕೆ ಯಾರೇ ನಿಯೋಜನೆಗೊಂಡರೂ ಪರವಾಗಿಲ್ಲ. ಅದು ಸ್ಥಳೀಯರೇ ಆಗಲಿ ಅಥವಾ ಹೊರಗಿನವರೇ ಆಗಲಿ. ಈ ಚುನಾವಣಾ ಕರ್ತವ್ಯದಲ್ಲಿ ಕಡ್ಡಾಯವಾಗಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಪಾರದರ್ಶಕತೆಗೆ ಧಕ್ಕೆಯಾಗಿರುವ ಯಾವುದೇ ದೂರುಗಳು ಬಂದಲ್ಲಿ ಖಂಡಿತವಾಗಿಯೂ ಕೂಡ ಶಿಸ್ತು ಕ್ರಮ ಕೈಗೊಳ್ಳುವೆ. ಯಾಕೆಂದರೆ, ಅವರೆಲ್ಲರೂ ಸರ್ಕಾರಿ ನೌಕರರು. ಈ ಪಾಲಿಕೆ ಚುನಾವಣೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲೇಬೇಕೆಂದು ಹೇಳಿದ್ದಾರೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ:

ಜಿಂದಾಲ್ ಸಮೂಹ ಸಂಸ್ಥೆ ಸೇರಿದಂತೆ ಬಳ್ಳಾರಿ-ವಿಜಯನಗರ‌ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಜಿಂದಾಲ್ ಸಮೂಹ ಸಂಸ್ಥೆ ನೌಕರರಲ್ಲಿ ಈ ಸೋಂಕು ಹರಡುವಿಕೆ ಹೆಚ್ಚಿದೆ. ಹೊರ ರಾಜ್ಯಗಳಿಂದ ಬಂದಂತಹ ಕಾರ್ಮಿಕರಿಂದ ಈ ಸೋಂಕು ಹೆಚ್ಚಾಗುತ್ತಿದೆ ಎಂದು ಹೇಳಲಿಕ್ಕಾಗಲ್ಲ. ಈಗಾಗಲೇ ಸಮುದಾಯದೊಳಗಡೆ ಈ ಸೋಂಕು ವ್ಯಾಪಕವಾಗಿ ಹಬ್ಬಿದೆ. ಹೀಗಾಗಿ, ಅದರ‌ ನಿಯಂತ್ರಣ ಮಾಡಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದರು.

ಚೆಕ್ ಪೋಸ್ಟ್​​ನ ಮುಖ್ಯ ಉದ್ದೇಶ ಸೋಂಕು ಹರಡುವಿಕೆ ತಡೆಯುವುದು:

ಅಂತಾರಾಜ್ಯ ಗಡಿಭಾಗದಲ್ಲಿ ಪುನರ್ ಸ್ಥಾಪಿಸಲಾದ ಚೆಕ್ ಪೋಸ್ಟ್​​ಗಳ ಮುಖ್ಯ ಉದ್ದೇಶ ಕೊರೊನಾ ಎರಡನೇ ಅಲೆಯ ಸೋಂಕು ಹರಡುವಿಕೆಯನ್ನು ತಡೆಗಟ್ಟೋದೇ ಆಗಿದೆ. ಹೀಗಾಗಿ, ಚೆಕ್ ಪೋಸ್ಟ್​​ಗಳಲ್ಲಿ ಸಾರ್ವಜನಿಕ ಸಂಚಾರಿ ವ್ಯವಸ್ಥೆಯಲ್ಲಿರುವ ಪ್ರತಿಯೊಬ್ಬರನ್ನೂ ಕೂಡ ತಪಾಸಣೆಗೆ ಒಳಪಡಿಸಲಾಗುವುದು ಎಂದರು.

ABOUT THE AUTHOR

...view details