ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮನೆಗೆ ಇಂದು ಶ್ರೀಶೈಲ ಹಾಗೂ ಕಾಶಿ ಪೀಠದ ಜಗದ್ಗುರುಗಳು ಭೇಟಿ ನೀಡಿದ್ದರು. ಜಗದ್ಗುರುಗಳು ಆಗಮಿಸುತ್ತಿದ್ದಂತೆಯೇ ಗಾಲಿ ಜನಾರ್ದನರೆಡ್ಡಿ ಕುಟುಂಬಸ್ಥರು ಶ್ರೀಗಳ ಪಾದಪೂಜೆ ನೆರವೇರಿಸಿದರು.
'ಶೀಘ್ರವೇ ಜನಾರ್ದನ ರೆಡ್ಡಿಯ ಗತ ವೈಭವ ಮರುಕಳಿಸಲಿದೆ' - janardana reddy
ಇಂದು ಗಾಲಿ ಜನಾರ್ದನ ರೆಡ್ಡಿ ಮನೆಗೆ ಶ್ರೀಶೈಲ ಹಾಗೂ ಕಾಶೀ ಪೀಠದ ಜಗದ್ಗುರುಗಳು ಆಮಿಸಿದ್ದು ರೆಡ್ಡಿಗೆ ಆಶೀರ್ವಾದ ಮಾಡಿದ್ದಾರೆ. ಇನ್ನು ರೆಡ್ಡಿ ಕುಟುಂಬವು ಶ್ರೀಗಳ ಪಾದ ಪೂಜೆ ನಡೆಸಿದರು. ಈ ಸಮಯದಲ್ಲಿ ಮಾತನಾಡಿದ ಶ್ರೀಗಳು, ಜನಾರ್ದನ ರೆಡ್ಡಿಗೆ ಮತ್ತೆ ಗತ ವೈಭವ ಮರುಕಳಿಸಲಿದೆ ಎಂದು ಭವಿಷ್ಯ ನುಡಿದರು.
!['ಶೀಘ್ರವೇ ಜನಾರ್ದನ ರೆಡ್ಡಿಯ ಗತ ವೈಭವ ಮರುಕಳಿಸಲಿದೆ'](https://etvbharatimages.akamaized.net/etvbharat/prod-images/768-512-3613283-thumbnail-3x2-giri.jpg)
ರೆಡ್ಡಿಗೆ ಶ್ರೀಗಳ ಅಭಯ: ಕಾಶಿ ಪೀಠದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯವರು ಲಿಂಗ ಧಾರಣೆ ಮಾಡಿಕೊಂಡಿದ್ದರು. ಅವರು ಹೇಮರೆಡ್ಡಿ ಮಲ್ಲಮ್ಮನವರ ಅನುಯಾಯಿಗಳಾಗಿದ್ದಾರೆ. ಈ ದಿನ ಬೆಳಗ್ಗೆ ಲಿಂಗಪೂಜೆ, ಪಾದಪೂಜೆ ಆಗಿದೆ. ಈ ಮನೆಯಲ್ಲಿ ಸಂಸ್ಕೃತಿಯ ವಾತಾವರಣ ಸೃಷ್ಟಿಯಾಗಿದೆ. ರೆಡ್ಡಿಯವರು ದಶಕದಿಂದಲೂ ಅನೇಕ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ಆ ಸಮಸ್ಯೆಯಿಂದ ಮುಕ್ತಿ ಹೊಂದಲಿದ್ದಾರೆ. ಶೀಘ್ರವೇ ಅವರ ಗತವೈಭವ ಮರುಕಳಿಸಲಿದೆ ಎಂದು ಕಾಶಿ ಪೀಠದ ಜಗದ್ಗುರು ಹಾರೈಸಿದ್ದಾರೆ.
ಸಾಮೂಹಿಕ ವಿವಾಹ ಮಹೋತ್ಸವದ ನಿಮಿತ್ತ ತಾವು ಬಳ್ಳಾರಿಗೆ ಬಂದಿದ್ದೆವು. ಈ ಹಿನ್ನೆಲೆಯಲ್ಲಿ ಇವತ್ತು ರೆಡ್ಡಿ ನಿವಾಸಕ್ಕೆ ಬಂದು ಪಾದಪೂಜೆ ಸ್ವೀಕರಿಸಿದೆವು. ರೆಡ್ಡಿಯವರು ಕಾಶಿ ಪೀಠದಲ್ಲಿ ಲಿಂಗ ಧಾರಣೆ ಮಾಡಿಕೊಂಡಿದ್ದರು. ಅಂದಿನಿಂದ ನಿಷ್ಠೆ ಭಕ್ತಿಯಿಂದ ಲಿಂಗ ಪೂಜೆ ಮಾಡ್ತಿದ್ದಾರೆ. ರೆಡ್ಡಿಯವರ ಕುಟುಂಬಕ್ಕೆ ಎಲ್ಲ ಒಳ್ಳೆಯದಾಗಲಿದೆ ಎಂದು ಶ್ರೀಗಳು ಆರ್ಶೀವದಿಸಿದ್ದಾರೆ.