ಬಳ್ಳಾರಿ: ಹೊಸಪೇಟೆ ತಾಲೂಕಿನ ರಾಯರಕೆರೆ ಜಂಬುನಾಥನಹಳ್ಳಿಯ ಗುಡ್ಡಗಾಡು ಪ್ರದೇಶ ಈಗ ಎಲ್ಲರ ಆಕರ್ಷಣಿಯ ಕೇಂದ್ರಬಿಂದುವಾಗಿದೆ. ಇಲ್ಲಿನ ಎರಡು ಎಕರೆ ಭೂಮಿಯಲ್ಲಿ ವಿದೇಶಿ ತಳಿ ಡ್ರ್ಯಾಗನ್ ಹಣ್ಣಿನ ಬೆಳೆ ಗಮನ ಸೆಳೆಯುತ್ತಿದೆ.
ಬಿಇ ಪದವೀಧರರಾಗಿರುವ ರಾಜಶೇಖರ ದ್ರೋಣವಲ್ಲಿ ಎಂಬುವರು ಕೋಳಿ ಫಾರಂ ಅನ್ನು ದಶಕಗಳಿಂದ ನಡೆಸುತ್ತಿದ್ದಾರೆ. ಆದ್ರೆ ಕಳೆದ ವರ್ಷದಿಂದ ತೋಟಗಾರಿಕೆ ಕೃಷಿಯತ್ತ ವಾಲಿದ್ದಾರೆ. ಎರಡು ಬದಿಯ ಗುಡ್ಡಗಾಡು ಪ್ರದೇಶದ ಮಧ್ಯ ಭಾಗದಲ್ಲೇ ಸುಮಾರು 2 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಈಗ ಆ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದಿದ್ದಾರೆ. ಅದುವೇ ಡ್ರ್ಯಾಗನ್ ಹಣ್ಣಿನ ಬೆಳೆ.
2018ರ ಜನವರಿ 29 ರಂದು ಈ ವಿದೇಶಿ ತಳಿ ಡ್ರ್ಯಾಗನ್ ಹಣ್ಣಿನ ಬೆಳೆಯನ್ನು ಬೆಳೆದ ರಾಜಶೇಖರ, ಬೆಂಗಳೂರು ಸೇರಿದಂತೆ ಇತರೆಡೆಗಳಲ್ಲಿ ಮಾರಾಟವನ್ನು ಜೋರಾಗಿ ನಡೆಸಿದ್ದಾರೆ. ಒಂದೂವರೆ ವರ್ಷದಲ್ಲಿ ಹತ್ತಾರು ಟನ್ ನಷ್ಟು ಡ್ರ್ಯಾಗನ್ ಹಣ್ಣಿನ ಇಳುವರಿ ಬಂದಿದೆ. ಆರಂಭದಲ್ಲಿ ಅಲ್ಪಸ್ವಲ್ಪ ಮಾತ್ರ ಇಳುವರಿ ಬಂದಿತ್ತು. ಈ ತಳಿಯ ಸೀಡ್ಸ್ ತಂದಾಗ, ಎರಡು ವರ್ಷಕ್ಕೆ ಡ್ರ್ಯಾಗನ್ ಹಣ್ಣಿನ ಇಳುವರಿ ಬರುತ್ತದೆಂಬ ಮಾಹಿತಿಯನ್ನು ಆ ಹಣ್ಣಿನ ತಳಿಯ ಮಾರಾಟಗಾರರು ರೈತ ರಾಜಶೇಖರ ಅವರಿಗೆ ತಿಳಿಸಿದ್ದರು. ಆದರೀಗ ಕೇವಲ ಒಂದೂವರೆ ವರ್ಷಕ್ಕೆ ಈ ಫಸಲು ಬಂದಿದ್ದು, ರಾಜಶೇಖರ ಮೊಗದಲ್ಲಿ ಮಂದಹಾಸ ಮೂಡಿದೆ.
ನೆಲದಲ್ಲಿ ಡ್ರ್ಯಾಗನ್ ಹಣ್ಣಿನ ಬೇರನ್ನು ಹೂತರೆ ಸಾಕು. ಅದು ಆಕಾಶದೆತ್ತರಕ್ಕೆ ಮೇಲೆಳುತ್ತದೆ. ಅದು ಬಾಗಿ ಬೆಳೆ ನಾಶವಾಗುವ ಸಾಧ್ಯತೆ ಇರಬಹುದೆಂಬ ಉದ್ದೇಶದೊಂದಿಗೆ ಆರೇಳು ಅಡಿಯ ಸಿಮೆಂಟಿನ ಕಂಬವನ್ನು ಹೂಳಿ, ಅದರ ಮೇಲಕ್ಕೆ ಹಣ್ಣಿನ ಗಿಡದ ಬಳ್ಳಿಯನ್ನು ಛತ್ರಿಯಾಕಾರದಲ್ಲಿ ಬಿಡಲಾಗಿದೆ. ಅಲ್ಲದೇ, ಗಿಡದ ತುಂಬೆಲ್ಲಾ ಮುಳ್ಳಿನ ಕಂಟಿ ಇರುತ್ತದೆ. ಮೊದಲಿಗೆ ಬಳ್ಳಿಯಲ್ಲಿ ಹೂವು ಬಿಡುತ್ತದೆ. ಆ ಮೇಲೆ ಕೆಂಪನೆಯ ಬಣ್ಣದ ಹಣ್ಣು ಬಿಡುತ್ತದೆ. ಅದನ್ನು ಚಾಕುವಿನಿಂದಲೇ ಕತ್ತರಿಸಿದ್ರೇ ಮಾತ್ರ ಈ ಹಣ್ಣು ಕೈಯಲ್ಲಿ ಸಿಗುತ್ತದೆ.
ವಿದೇಶಿ ಹಣ್ಣು ಬೆಳೆಯೋದೆ ದೊಡ್ಡ ಸಾಧನೆ: